Ad imageAd image

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬ ಆಚರಣೆ

Bharath Vaibhav
ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬ ಆಚರಣೆ
WhatsApp Group Join Now
Telegram Group Join Now

*ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬ ಆಚರಣೆ*

ದೇವದುರ್ಗ:- ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಮ್ ಹಬ್ಬವನ್ನು ಜಾತಿ ಮತ ಪಂಥ ಬೇಧವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಹೊಂದಿರುವ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ತಾಲೂಕಿನ ಬೂದಿನಾಳ ಗ್ರಾಮದಲ್ಲಿ ಆಚರಿಸಲಾಯಿತು.

 

ಜೂಲೈ 14 ರಂದು ರಾತ್ರಿ ಇಮಾಮ್ ಖಾಸಿಂ ಸಾಬ್ ಮತ್ತು ಹಸೇನ್ ಹುಸೇನ್ ಭಾಷಾ ಸವಾರಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ಇಮಾಮ್ ಖಾಸಿಂ ಸಾಬ್ ದೇವರನ್ನು ಮೋಹಿನುದ್ದಿನ್ ಸಾಬ್ ಪೂಜಾರಿ ದೇವರನ್ನು ಹಿಡಿದುಕೊಂಡಿದ್ದರೆ, ಹಸೇನ್ ಹುಸೇನ್ ಭಾಷಾ ಸವಾರಿ ಕರಿಯಪ್ಪ ಪೂಜಾರಿ ದೇವರನ್ನು ಹಿಡಿದುಕೊಂಡು ರವಿವಾರದಂದು ಸಾಯಂಕಾಲ ಸನಾಯ, ಹಲಗೆ ಗಳೊಂದಿ ಸಾಯಂಕಾಲ ಊರಿನ ದೇವರ ಭಾವಿ ಹತ್ತಿರ ಇರುವ ಹಜರತ್ ಗೋಕುಲ್ ಸಾಬ್ ದರ್ಗಾಕ್ಕೆ ಊರಿನ ಗುರು ಹಿರಿಯರು, ಎಲ್ಲಾರೂ ಸೇರಿಕೊಂಡು ಹೋಗಿ ಪೂಜೆ ಮಾಡಿಸಿದರು.

 

ರಾತ್ರಿಎಲ್ಲಾ ಯುವಕರು ಅಲಾಯ ಹೆಜ್ಜೇಗಳನ್ನು ಕುಣಿದರು, ಭವ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಹೆಸರುವಾಸಿಯಾದ ಕಳ್ಳರ ವೇಷ,ಸೀರೆಯನ್ನು ಉಟ್ಟುಕೊಂಡು, ಕರಡಿ ಕುಣಿತ ಮುಂತಾದ ರೀತಿಯಲ್ಲಿ ಆಲಯಾ ಕುಣಿದು ಕುಪ್ಪಳಿಸಿ ಸಂಬ್ರಮ ಮೆರೆದರು.

 

ಜುಲೈ 16 ರಂದು ಮೌಲಾಲಿ ಸಾಬ್ ಸವಾರಿ ರಾಜಸಾಬ್ ಸಾಬ್ ದೇವರನ್ನು ಹಿಡಿದರು,ಅತ್ಯಂತ ವಿಜೃಂಭಣೆಯಿಂದ ಕತಲ ರಾತ್ರಿ (ಗಂಧರಾತ್ರಿ) ಆಚರಿಸಲಾಯಿತು,ಮೊಹರಂ ಕೊನೆಯ ದಿನವಾದ ಬುಧವಾರ ಸಂಜೆ ದಫನ್ ಕಾರ್ಯಕ್ಕೆ ಆಲಂ ದೇವರುಗಳು ಅಪಾರ ಜನಗಳ ಮದ್ಯೆ ಅತ್ಯಂತ ಅದ್ದೂರಿಯಾಗಿ ಮೆರವಣಿಗೆ ಮೂಲಕ ತೆರೆ ಎಳೆಯಲಾಯಿತು.ಮೊಹರಂ ಹಬ್ಬವನ್ನು ವೀಕ್ಷಿಸಲು ಗ್ರಾಮದ ಸಹಸ್ರ ಸಂಖ್ಯೆಯಲ್ಲಿ ಗುರುಹಿರಿಯರು,ಪುರುಷರು,ಮಹಿಳೆಯರು,ಯುವಕರು ಹಾಗೂ ಚಿಕ್ಕ ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ಹಾಕಿಕೊಂಡು ಆಗಮಿಸಿ ಆಲಂ ದೇವರುಗಳ ಕೃಪೆಗೆ ಪಾತ್ರರಾದರು.

 

ಈ ಮೊಹರಂ ಹಬ್ಬದ ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು,ಊರಿನಪ್ರಮುಮುಖಂಡರು,ಗ್ರಾ.ಪಂ.ಅಧ್ಯಕ್ಷರು,ಸದಸ್ಯರು,ಯುವಕರ ಬಳಗದವರು,ಹಿಂದೂ ಮುಸ್ಲಿಂ ಭಾವೈಕ್ಯತೆಯ ನಾವೇಲ್ಲಾರು ಒಂದೇ ಎಂದು ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು,

 

ಈ ಸಂದರ್ಭದಲ್ಲಿ ಬಸವರಾಜಪ್ಪ ಗೌಡ ಪೋ ಪಾಟೀಲ,ಬಸನಗೌಡ ಮಾಲಿ ಪಾಟೀಲ, ಖಾಸಿಂ ಸಾಬ್, ನೂರಸಾಬ್ , ನಬೀಸಾಬ್, ಬಾವಸಾಬ್, ಫಕೀರ್ ಸಾಬ್,ಮಲ್ಲಿಕಾರ್ಜುನ ನಾಯಕ, ಶರೀಫ್ ಸಾಬ್, ಶಿವರಾಜ್ ನಾಯಕ, ಬಸವರಾಜ ಪೂಜಾರಿ,ಹನುಮಗೌಡ, ವೀರೇಶ್,ಇಮಾಮ್, ಮೌನೇಶ್ ,ಬಸಲಿಂಗಪ್ಪ ,ನಾಗಪ್ಪ ಮುಂತಾದವರು ಸೇರಿದಂತೆ ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು.

ವರದಿ : ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!