ಲಕ್ನೋ: ಮಿಚೆಲ್ ಮಾರ್ಷ ಹಾಗೂ ಆಡೆನ್ ಮಾರ್ಕಮ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಗೇಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ 204 ರನ್ ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ ಮಾಡಿದ ಲಕ್ನೋ ಸೂಪರ್ ಗೇಂಟ್ಸ್ ತಂಡ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಇಳಿಯಿತು. ಆರಂಭ ಆಟಗಾರರಾದ ಮಾರ್ಕಮ್ ಹಾಗೂ ಮಿಚೆಲ್ ಮಾರ್ಷ ಪ್ರತಿ ಓವರ್ ಗೆ 10 ರನ್ ಸರಾಸರಿಯಲ್ಲಿ ರನ್ ಗಳಿಸುವುದನ್ನು ಯಾವುದೇ ಹಂತದಲ್ಲಿ ಬಿಟ್ಟು ಕೊಡಲಿಲ್ಲ. ಮಾರ್ಷ 31 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು.
ಮಾರ್ಕಮ್ 38 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ನೆರವಿನಿಂದ 53 ರನ್ ಕಲೆ ಹಾಕಿ ನಿರ್ಗಮಿಸಿದರು. ಇದಾದ ಆಯುಷ್ ಬದೋನಿ ಹಾಗೂ ಡೆವಿಡ್ ಮಿಲ್ಲರ್ ರನ್ ಪ್ರವಾಹವನ್ನು ಮುಂದುವರೆಸಿದರು.