ಮುಂಬೈ: ಚೊಚ್ಚಲ ಐಪಿಎಲ್ ಪಂದ್ಯಾವಳಿಯಲ್ಲಿಯೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಅಶ್ವಿನಿ ಕುಮಾರ್ 24 ಕ್ಕೆ 3 ವಿಕೆಟ್ ಪಡೆದರು. ಇದರ ಪರಿಣಾಮವಾಗಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 116 ರನ್ ಗಳಿಗೆ ನಿಯಂತ್ರಿಸಿತು. ಹೀಗಾಗಿ ಮುಂಬೈ ಇಂಡಿಯನ್ಸ್ ಗೆಲ್ಲಲು 117 ರನ್ ಗಳ ಸುಲಭ ಗೆಲುವಿನ ಗುರಿ ಪಡೆಯಿತು.
ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 16.1 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕೋಲ್ಕತ್ತಾ ನೈಟರ್ಸ್ ಬ್ಯಾಟುಗಾರರು ಸಂಪೂರ್ಣವಾಗಿ ವಿಫಲರಾದರು. ತಂಡದ ಪರವಾಗಿ ರೆಹಾನೆ 26, ಮನೀಷ್ ಪಾಂಡೆ 19 ರನ್ ಗಳಿಸಿದ್ದೇ ವೈಯಕ್ತಿಕ ಉತ್ತಮ ಸಾಧನೆಗಳಾದವು ಎಂಬುದರಲ್ಲಿಯೇ ಇನ್ನಿಂಗ್ಸ್ ನ ಎಲ್ಲ ಕಥೆ ಗೊತ್ತಾಗುತ್ತದೆ.