ಪಂದ್ಯ ಆರಂಭ ಸಮಯ: ಸಾಯಂಕಾಲ 7:30
ಹೈದರಾಬಾದ: ರಾಜೀವ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 41 ನೇ ಲೀಗ್ ಪಂದ್ಯದಲ್ಲಿ ಸನ್ ರೈಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡವು ಮುಖಾ ಮುಖಿಯಾಗಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.
ಮುಂಬೈ ಇಂಡಿಯನ್ಸ್ ತಂಡವು ತಾನಾಡಿದ 8 ಪಂದ್ಯಗಳಿಂದ 4 ರಲ್ಲಿ ಗೆದ್ದು 4 ರಲ್ಲಿ ಸೋತು 8 ಅಂಕಗಳನ್ನು ಗಳಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. ಇನ್ನು ಸನ್ ರೈಸ್ ಹೈದರಾಬಾದ್ ತಂಡವು ತಾನಾಡಿರುವ 7 ಪಂದ್ಯಗಳಲ್ಲಿ 2 ರಲ್ಲಿ ಗೆಲುವು 5 ರಲ್ಲಿ ಸೋಲನುಭವಿಸುವ ಮೂಲಕ ಕೇವಲ 4 ಅಂಕಗಳನ್ನು ಹೊಂದಿದ್ದು, ಅಂಕ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಹೀಗಾಗಿ ಈ ತಂಡಗಳ ದೃಷ್ಠಿಯಿಂದ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆರಲು ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಪಂದ್ಯಾವಳಿಯಲ್ಲಿ ಮುಂದಿನ ಹಂತಕ್ಕೆರಲು ಹೆಚ್ಚು ಅವಕಾಶ ಉಂಟು. ಆದರೆ ಸನ್ ರೈಸ್ ಹೈದರಾಬಾದ್ ಮುಂದಿನ ಹಂತಕ್ಕೆರಲು ಪವಾಡವೇ ನಡೆಯಬೇಕಿದೆ. ಆದರೆ ಈ ಪಂದ್ಯವನ್ನು ಗೆದ್ದರೆ ಮುಂಬೈ ಇಂಡಿಯನ್ಸ್ ಗೆ ಪಂದ್ಯಾವಳಿಯಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಸಹಾಯಕಾರಿಯಾಗಲಿದೆ.