ಹುಬ್ಬಳ್ಳಿ: ಧಾರವಾಡದ ಕೆಎಲ್‌ಇ ಶಾಲೆಯಲ್ಲಿ ಮಾರ್ಡನ್ ಯುನೈಟೆಡ್ ನೇಷನ್ಸ್ (ಎಂಯುಎನ್) ಸಮಾರಂಭ ಜರುಗಿತು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ಹಿಮಾಂಶು ಕೊಠಾರಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ನಾಐಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಪ್ರಾಚಾರ್ಯರಾದ ಡಾ.ಶುಭಾಂಗಿ ಮೋರೆ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂತಹ ಸದಾವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಈ ಅವಕಾಶ ಬಳಸಿಕೊಂಡು ಎಲ್ಲ ಮಕ್ಕಳು ನಿಮ್ಮ ಕ್ರಿಯಾತ್ಮಕ ಚಟುವಟಿಕೆಗಳನ್ನು ಮತ್ತಷ್ಟು ಸದೃಢಗೊಳಿಸಬೇಕೆಂದು ಕಿವಿಮಾತು ಹೇಳಿದರು.
ಬಾನುಲಿ ಕಾರ್ಯಕ್ರಮಗಳ ನಿರೂಪಕಿ ಆರ್‌ಜೆ ಮೇಘ ಬರೋಟ್ ಮಾತನಾಡಿದರು. ಕೆಎಲ್‌ಇ ಸಂಸ್ಥೆಗಳಾದ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಸೌದತ್ತಿ ಹಾಘೂ ಕೆ.ಇ. ಬೋರ್ಡ್, ಜೆಎಸ್‌ಎಸ್ ಕೆಲಗೇರಿ, ಬಾಲವಿನಾಯಕ ಜೆಎಸ್‌ಎಸ್ ಹುಬ್ಬಳ್ಳಿ ಸೇರಿ ಒಟ್ಟು ೧೨ ಶಾಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು
.
ಸುಧೀರ್ ಕುಲಕರ್ಣಿ ಬಿ ವಿ ನ್ಯೂ ಜ ಹುಬ್ಬಳ್ಳಿ