ಬಾದಾಮಿ:- ಪುರಸಭೆ ಅಧ್ಯಕ್ಷ ಸ್ಥಾನ ಅವಧಿ ಮುಗಿದು ಈಗ ಬಾದಾಮಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಬಂದಿರೋದರಿಂದ ತೀವ್ರ ಪೈಪೋಟಿ ಶುರುವಾಗಿದೆ. ಈಗಾಗಲೇ ಹಗ್ಗ ಜಗ್ಗಾಟ ಶುರುವಾಗಿದ್ದು ಬಿ. ಜೆ. ಪಿ. ಕಾಂಗ್ರೇಸ್ ಪುರಸಭೆ ಸದಸ್ಯರ ಒಮ್ಮತ ಪಡೆಯುವಲ್ಲಿ ನಿರತರಾಗುತ್ತಿದ್ದಾರೆ ಎನ್ನಬಹುದು.
ಸಾಮಾನ್ಯ ವರ್ಗಕ್ಕೆ ಬಾದಾಮಿ ಪುರಸಭೆ ಸ್ಥಾನ ಬಂದಿರೋದು ಬಹಳಷ್ಟು ಪೈಪೋಟಿಗೆ ಕಾರಣವಾಗಿದೆ ಎನ್ನಲಾಗ್ತಾ ಇದೆ. ಅದರಲ್ಲೂ ಕಾಂಗ್ರೆಸ್ ನ ಸದಸ್ಯರಲ್ಲಿ ಸಿದ್ದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ್ ಬಣದವರು ಇರುವುದರಿಂದ ತ್ರಿಕೋಣ ಸ್ಪರ್ಧೆ ರೀತಿಯಲ್ಲಿ ಪುರಸಭೆ ಸದಸ್ಯರ ಸಮ್ಮತಿ ಪಡೆದುಕೊಳ್ಳುವಲ್ಲಿ ಅಷ್ಟು ಸುಲಭದ್ದಲ್ಲ ಎನ್ನುವ ಮಾತುಗಳು ಅಷ್ಟೇ ಸ್ಪಷ್ಟವಾಗಿವೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಪುರಸಭೆ ಸದಸ್ಯರಾದ ಬಿ. ಜೆ ಪಿ. ಯಿಂದ ನಾಗರಾಜ್. ಎಸ್. ಕಾಚಟ್ಟಿ,, ಕಾಂಗ್ರೆಸ್ ನಿಂದ ಶಂಕರ ಕನಕಗಿರಿ ಹೆಸರುಗಳು ಕೇಳಿ ಬರುತ್ತಿವೆ ಎನ್ನಲಾಗ್ತಾ ಇದೆ.ಪುರಸಭೆ ಅಧ್ಯಕ್ಷ ಸ್ಥಾನ ಯಾರ ತೆಕ್ಕೆಗೆ ಸೇರಲಿದೆ ಎನ್ನುವುದು ಕಾಯ್ದು ನೋಡಬೇಕಿದೆ.
ವರದಿ:- ರಾಜೇಶ್. ಎಸ್. ದೇಸಾಯಿ