Ad imageAd image

ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದ ನಗರಸಭೆ ಸದಸ್ಯರು.

Bharath Vaibhav
ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದ ನಗರಸಭೆ ಸದಸ್ಯರು.
WhatsApp Group Join Now
Telegram Group Join Now

ಸಿರುಗುಪ್ಪ :- ನಗರಸಭೆ ಕಛೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಕಾರ್ಯವಿಳಂಬ ಮತ್ತು ನಿರ್ಲಕ್ಷ್ಯತೆ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕ ಹಣದ ದುರುಪಯೋಗವಾಗಿರುವ ಗಂಭೀರ ಆರೋಪ ಮಾಡಿದರು.

ಸಭೆಯಲ್ಲಿ ಹಿಂದಿನ ಸಭೆಯ ನಡವಳಿಗಳನ್ನು ಓದುವಾಗ ನಗರದಲ್ಲಿ ಕಸದ ಸಮಸ್ಯೆ, ಚರಂಡಿ ಸ್ವಚ್ಛತೆ ನಿರ್ವಹಣೆಯಿಲ್ಲದೇ ದಿನೇ ದಿನೇ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ, ಟೈಪಾಯಿಡ್ ರೋಗಗಳ ಹಾವಳಿಯಿಂದ ಸಾರ್ವಜನಿಕರು ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ನೀವೇನು ಮಾಡುತ್ತಿರುವಿರಿ ಎಂದು ಹಿರಿಯ ಆರೋಗ್ಯ ನಿರೀಕ್ಷಕ ರಂಗಸ್ವಾಮಿ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ನೀರು ಪೂರೈಸಲೆಂದು ನದಿ ಮಾತ್ರವಲ್ಲದೇ ಕೆರೆಯನ್ನು ನಿರ್ಮಿಸಲಾಗಿದ್ದು, ಕೆಲವೊಂದು ವಾರ್ಡ್ಗಳಲ್ಲಿ ನೀರಿಗಾಗಿ ಎಂಟರಿಂದ ಹತ್ತು ದಿನಗಳು ಕಾಯಬೇಕಿದೆ. ನದಿ ತುಂಬಿ ಹರಿಯುತ್ತಿರುವ ಮಳೆಗಾಲದಲ್ಲೇ ಈ ಪರಿಸ್ಥಿತಿ ಇದ್ದರೆ ಮುಂದಿನ ದಿನಗಳಲ್ಲಿ ಇನ್ನು ಎಂತಹ ಸಮಸ್ಯೆಗಳನ್ನು ತಂದೊಡ್ಡುವಿರಿ ನೀವು ನಿಜವಾಗಲೂ ಟೆಕ್ನಿಕಲ್ ಅಧಿಕಾರಿಯೇ? ಎಂದು ಕೆಲವು ಸದಸ್ಯರಿಂದ ಎ.ಇ.ಇ ಗಂಗಾಧರಗೌಡ ಅವರನ್ನು ಪ್ರಶ್ನಿಸಲಾಯಿತು.

ನಗರಸಭೆ ಆಯುಕ್ತ ಹೆಚ್.ಎನ್.ಗುರುಪ್ರಸಾದ್ ಅವರಿಂದ ಸಭೆಯಲ್ಲಿ ಚರ್ಚಿಸುವ ವಿಷಯಗಳಾದ 1 ರಿಂದ 31 ವಾರ್ಡ್ ಗಳಲ್ಲಿ ಬೀದಿ ದೀಪ ಅಳವಡಿಕೆ ಮತ್ತು ಸಿವಿಲ್ ಕಾಮಗಾರಿ, 2ನೇ ವಾರ್ಡಿನಲ್ಲಿ ಕೊಪ್ಪಳ ಮಸೀದಿ ಮತ್ತು 6ನೇ ವಾರ್ಡಿನ ಝಂಡಾಕಟ್ಟೆ ಹತ್ತಿರ ಬೋರ್‌ವೆಲ್ ಕೊರೆಸುವುದು, ಸಂತೆಮಾರುಕಟ್ಟೆಯಲ್ಲಿ ಶಿಥಿಲಗೊಂಡಿರುವ ಕಮೇಲಾ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು.

ನಗರಸಭೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸುವುದು. ವಾರ್ಷಿಕ ಲೇಖನಾ ಸಾಮಗ್ರಿಗಳನ್ನು ಖರೀಧಿಸುವುದು. ಪುಸ್ತಕ ಮತ್ತು ಅರ್ಜಿಗಳನ್ನು ಖರೀಧಿಸುವ ಬಗ್ಗೆ, 24ನೇ ವಾರ್ಡಿನ ಎಮ್.ಆರ್.ಎಫ್. ಷೋರೂಮ್ ಹಿಂಭಾಗದ ಪಾರ್ಕ್ನಿಂದ ಬೆಲ್ಲದ ಈರಣ್ಣ ಮನೆವರೆಗೆ 4ಇಂಚು ಪೈಪ್‌ಲೈನ್ ಹಾಕುವುದು.ಅನಧಿಕೃತ ನಳಗಳನ್ನ ಅಧಿಕೃತಗೊಳಿಸುವುದು.

ಪ್ರತಿಯೊಂದು ವಿಷಯದ ಚರ್ಚೆಯಲ್ಲೂ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆ. ಮಾಹಿತಿ ಕೊರತೆ ಕಂಡುಬಂದಿತು.ಇದಕ್ಕೆ ಸಂಬಂದಿಸಿದ ಮಾಹಿತಿ ನೀಡಬೇಕು. ಆಯಾ ತಿಂಗಳ ಆಯವ್ಯಯದ ವಿವರ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.

ವರದಿ :-ಶ್ರೀನಿವಾಸ. ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!