ಮುದಗಲ್ಲ :ಪುರಸಭೆ ಸ್ಥಾಯಿ ಸಮಿತಿ ನೂತನವಾಗಿ ಅಧ್ಯಕ್ಷರಾದ ರಂಜಾನ್ ಬೀ ಅಜ್ಮೀರ್ ಸಾಬ
ಅವರಿಗೆ ಪದಗ್ರಹಣ ಸಂದರ್ಭದಲ್ಲಿ ಮುದಗಲ್ಲ ಯೂತ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಂಜಾನ್ ಬೀ ಅಜ್ಮೀರ್ ಸಾಬ ಅವರು ಪುರಸಭೆ ಎಲ್ಲ ಸದಸ್ಯ ರನ್ನು ವಿಶ್ವಾಸ ಪಡೆಯುತ್ತೇನೆ ಅಧಿಕಾರ ಸಿಗುವುದು ಅಪರೂಪ. ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಬಡವರು, ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುದಗಲ್ಲ ಮುದಗಲ್ಲ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಾದ ಹುಸೇನ್ ಪಾಶ (ಮುನ್ನ)ಮೌನೇಶ ಚಲುವಾದಿ ,ಖದರ್ ಪಾನ್ ವಾಲೆ ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ




