ಮಾನವಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2025 26ನೇ ಸಾಲಿನ 28 ಕೋಟಿ ರೂಪಾಯಿಗಳಷ್ಟು ಆಯವ್ಯಯ ಹಾಗೂ ಉಳಿತಾಯ ಬಜೆಟ್ ಅನ್ನು ಅಧ್ಯಕ್ಷ ಲಕ್ಷ್ಮಿ ಡಿ ಗಂಡ ವೀರೇಶ್ ಇವರ ಅನುಮತಿ ಮೇರೆಗೆ ಪುರಸಭೆಯ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಮಂಡಿಸಿದರು.
ವಿವಿಧ ಮೂಲ ದ ಆದಾಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಬರುವ ಅನುದಾನ ಪರಿಗಣಿಸಿ ಆಯವ್ಯಯ ವರದಿಯನ್ನು ತಯಾರಿಸುವುದನ್ನು ಮಂಡಿಸಿದರು.
ನಂತರ ಸಭೆಯಲ್ಲಿ ಮಾತನಾಡಿದ ಪುರಸಭೆಯ ವಿರೋಧ ಪಕ್ಷದ ನಾಯಕರದ ರಾಜ ಮಹೇಂದ್ರ ನಾಯಕ್ ಅವರು ಈ ಬಜೆಟ್ ಕೇವಲ ವೆಂಕಟ್ರಮಣ ಗೋವಿಂದ ಗೋವಿಂದ ಎನ್ನುವಂತೆ ಪಟ್ಟಣದ ಜನರಿಗೆ ಮೂರು ನಾಮ ಹಾಕುವ ಆಯವ್ಯಯ ವರದಿ ಈ ಹಿಂದೆ ಸಾಕಷ್ಟು ಹಣ ವ್ಯಯ ಮಾಡಿದರು ಸಹ ಪುರಸಭೆಗೆ ಯಾವುದೇ ಪ್ರಯೋಜನವಾಗಿಲ್ಲ ಅನೇಕ ಕೆಲಸಕ್ಕೆ ಬಾರದ ಯೋಜನೆಗಳಿಗೆ ಹಣವನ್ನು ವ್ಯಯ ಮಾಡಿರುತ್ತಾರೆ ಅಂಕಿ ಅಂಶಗಳ ಸಹಿತ ಬಹಿರಂಗಪಡಿಸಿದರು.
ಅನೇಕ ಜ್ವಲಂತ ಸಮಸ್ಯೆಗಳು ಮೂಲಭೂತ ಸೌಕರ್ಯಗಳನ್ನು ಸಾಮಾನ್ಯ ಜನರಿಗೆ ಒದಗಿಸುವಲ್ಲಿ ಮುಖ್ಯ ಅಧಿಕಾರಿಗಳು ಮತ್ತು ಪುರಸಭೆಯ ಸಿಬ್ಬಂದಿ ಅಧ್ಯಕ್ಷರು ವಿಫಲರಾಗಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯ ಅಧಿಕಾರಿಗಳು ಪರಶುರಾಮ್ ದೇವರಮನೆ ಅಧ್ಯಕ್ಷ ಲಕ್ಷ್ಮೀ ಗಂಡ ವೀರೇಶ್ ಉಪಾಧ್ಯಕ್ಷೆ ಮೀನಾಕ್ಷಿ ಗಂಡ ರಾಮಕೃಷ್ಣ ಪುರಸಭೆ ಸದಸ್ಯರುಗಳು ಸಹ ಭಾಗಿಯಾಗಿದ್ದರು.
ವರದಿ :ಶಿವ ತೇಜ