ಸೇಡಂ : ತಾಲೂಕಿನ ಕೊಡ್ಲಾ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ ಪ್ರಾರಂಭವಾಗಿ ವರ್ಷಗಳು ಗತಿಸಿದರು. ವಿದ್ಯಾರ್ಥಿಗಳಿಗೆ ಕೆಲವು ಕುಂದು ಕೊರತೆಗಳು ಎದ್ದು ಕಾಣುತ್ತಿವೆ ಶಾಲೆಗೆ ತಡೆಗೋಡೆಯ ಕೊರತೆ. ಸಿ.ಸಿ.ಕ್ಯಾಮೆರಾಗಳ ಕೊರತೆ ವಿದ್ಯುತ್ ಕೊರತೆ. ಶೌಚಾಲಯಗಳ ಕೊರತೆ, ಈ ಕೊರತೆಗಳ ಮಧ್ಯದಲ್ಲಿ ಶಾಲೆ ನಡೆಯುತ್ತಿದೆ. ತಡೆಗೋಡೆ ಇಲ್ಲದೆ ವಿದ್ಯಾರ್ಥಿಗಳು ಹೊರಗಡೆ ಬಹಳಷ್ಟು ತಿರುಗಾಡುತ್ತಾರೆ. ಇದು ಅಲ್ಲದೆ ಸಿಕ್ಕಾಪಟಿ ಹೊರಗಿನ ಜನರು ಶಾಲೆಯ ಒಳಗಡೆ ನುಗ್ಗುತಾರೆ ಆದ್ದರಿಂದ ಸಿ ಸಿ ಕ್ಯಾಮೆರಾ ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಈಗಾಗಲೇ ಸಧ್ಯ ಇದ್ದ ಕಟ್ಟಡದ ಮೇಲೆ ಪುನಃ ಕಟ್ಟಡ ಪ್ರಾರಂಭವಾಗಿದ್ದು ಆ ಕಟ್ಟಡವು ಕಳಪೆ ಮಟ್ಟದಾಗಿದೆ ಸರಿಯಾದ ರೀತಿ ಮರಳು ಮತ್ತು ಸಿಮೆಂಟ್ ಇಟ್ಟಂಗಿ ಬಳಸುತ್ತಿಲ್ಲ. ಇದು ಅಲ್ಲದೆ ಅಲ್ಲಿರುವ ಕಿರಿಯ ವೈದ್ಯರು ಮಕ್ಕಳ ಕಡೆ ಸರಿಯಾದ ರೀತಿ ಗಮನ ಹರಿಸುತ್ತಿಲ್ಲ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸೂಕ್ಷ್ಮ ರೀತಿಯಿಂದ ಪರಿಗಣಿಸಿ ವಿದ್ಯಾರ್ಥಿಗಳ ಉಜ್ಜಲ ಭವಿಷ್ಯ ನಿರ್ಮಾಣ ಮಾಡಬೇಕು ಮೇಲಾಧಿಕಾರಿಗಳಾದ ತಾವು ಎಂಟು ದಿವಸದೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆ ವಸತಿ ಶಾಲೆಯ ಎದುರುಗಡೆ ತಾವು ಬರುವರೆಗೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ರಾಮಚಂದ್ರ ಗುತ್ತೇದಾರ್ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹೇಶ್ ಪಾಟೀಲ್, ಚಂದ್ರಶೇಖರ್ ಪೂಜಾರಿ, ಶ್ರೀನಿವಾಸ್ ರೆಡ್ಡಿ, ದೇವುಕುಮಾರ್ ನಾಟಿಕರ್, ಗುಂಡಪ್ಪ ಪೂಜಾರಿ, ರವಿಸಿಂಗ್, ರಮೇಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್




