ಸಂಕೇಶ್ವರ : ಕಲ್ಲಿನಿಂದ ಹಲ್ಲೆ ನಡೆಸಿ, 20 ವರ್ಷದ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿರುವ ಘಟನೆ ಸಂಕೇಶ್ವರ ಪೋಲಿಸ ಠಾಣಾ ವ್ಯಾಪ್ತಿಯ ಕಣಗಲಾ ಗ್ರಾಮದಲ್ಲಿನ ಸರಕಾರಿ ಆಸ್ಪತ್ರೆಯ ಬಳಿ ನಡೆದಿದೆ.
ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಸೇನಾಪತಿ ಕಾಪ್ಸಿಯ ನಿವಾಸಿಯಾಗಿದ್ದ ದೇಮಾನಿ ( ಆನಂದ ) ಡುಕ್ರಿ (20 ) ಕೊಲೆಯಾದವರು
ನಿನ್ನೆ ಭಾನುವಾರ ಸಂಜೆಯ ವೇಳೆಯಲ್ಲಿ ಕಣಗಲಾ ಗ್ರಾಮದ ಹೈವೇ ರಸ್ತೆಯ ಬಳಿಯ ಜಮೀನಿನಲ್ಲಿಕೊಲೆ ನಡೆದಿದೆ ಎನ್ನಲಾಗಿದೆ.
ಆರೋಪಿ ಸೇರಿ ಇಬ್ಬರು ಸಹ ಸೇನಾಪತಿ ಕಾಪ್ಸಿಯಿಂದ ಕಣಗಲಾ ಬಳಿ ಬಂದಿದ್ದು, ಕುಲಕ್ಷ ಕಾರಣಕ್ಕೆ ದೇಮಾನಿ ( ಆನಂದ ) ಡುಕ್ರಿ ಎಂಬ ಯುವಕನ್ನು ಕಿಶನ ವಿಶಾಲ ಮಾಳಿ ಎಂಬ ಆರೋಪಿಯು ಕಲ್ಲಿನಿಂದ ಹಲ್ಲೆ ನಡೆಸಿ ಶರ್ಟ್ ನಿಂದ ಕುತ್ತಿಗೆಗೆ ಸುತ್ತಿ ಬಿಗಿದ್ದು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಮೃತ ಯುವಕನ ತಂದೆ ದೂರು ನೀಡಿದ್ದು, ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರಿಂದ ತನಿಖೆ ನಡೆದಿದೆ.




