ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರ ಗ್ರಾಮದಲ್ಲಿ ಅಕ್ರಮ ಮಣ್ಣು ತುಂಬಿಕೊಂಡು ಹೋಗುವುದನ್ನು ಕಂಡು ಸುರೇಬಾನ್ ಪೊಲೀಸ್ ಠಾಣೆಗೆ ಕರೆ ಮಾಡಿ ಅಕ್ರಮ ಮಣ್ಣು ತುಂಬುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದ ಪ್ರಶಾಂತ ಶಿವಪ್ಪ ಅಂಗಡಿ.
ಈ ಒಂದು ಮಾಹಿತಿ ನೀಡಿದ ಕಾರಣಕ್ಕೆ ಮುಳ್ಳೂರ್ ಗ್ರಾಮದ ನಿವಾಸಿಯಾಗಿರುವ ಚನ್ನಪ್ಪ ಗುದ್ದಿ ಪ್ರಶಾಂತ ಶಿವಪ್ಪ ಅಂಗಡಿ ಅವರಿಗೆ ದೂರವಾಣಿ ಕರೆಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.
ಪ್ರಶಾಂತ ಶಿವಪ್ಪ ಅಂಗಡಿ ಸಾಮಾಜಿಕ ಹೋರಾಟಗಾರ ಅಕ್ರಮ ಮಣ್ಣು ತುಂಬುವವರಿಂದ ಪತ್ರಕರ್ತರಾದನಿಗೆ ಕೊಲೆ ಬೆದರಿಕೆ ಅವಾಜ್ ಹಾಕಿದ ಚೆನ್ನಪ್ಪ ಗುದ್ದಿ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಸುರೇಬಾನ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಪ್ರಶಾಂತ ಶಿವಪ್ಪ ಅಂಗಡಿ ದಿನಾಂಕ.12/10/2025 ರಂದು ಮಧ್ಯಾಹ್ನ 12 ಗಂಟೆ 25 ನಿಮಿಷಕ್ಕೆ, ಸುರೇಬಾನ ಪೊಲೀಸ್ ಠಾಣೆಯ ಸಿಬ್ಬಂದಿಯಾದ ದ್ಯಾಮನಗೌಡ ಮರಲಿಂಗನವರ ಇವರಿಗೆ ಮುಳ್ಳೂರು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ತುಂಬುವುದರ ಬಗ್ಗೆ, ಫೋನಿನ ಮುಖಾಂತರ ಮಾಹಿತಿ ನೀಡಿದ್ದರು.
ನಂತರ ಸುರೇಬಾನ ಪೊಲೀಸರಾದ ಉಮೇಶ ಅರಭಾಂವಿ ಇವರ ಫೋನಿನಿಂದ ಚನ್ನಪ್ಪ ಗುದ್ದಿ ಎಂಬುವರು ಪತ್ರಕರ್ತರಾದ ಪ್ರಶಾಂತ ಅಂಗಡಿ ಅವರ ಜೊತೆ ಮಾತನಾಡಿ ಕೊಲೆ ಬೆದರಿಕೆ ಹಾಕಿದ್ದಾರೆ.
ಈ ಆಗಿರುವ ಘಟನೆಯನ್ನು ಕಂಡು ರಾಮದುರ್ಗ ತಾಲೂಕಿನ ಎಲ್ಲಾ ಪತ್ರಕರ್ತರು ಕೂಡಿಕೊಂಡು ಬೆದರಿಕೆ ಹಾಕಿರುವವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕಿನ ತಸಿಲ್ದಾರರಿಗೆ ಹಾಗೂ (ಸಿಪಿಐ) ರಾಮದುರ್ಗ ಇವರಿಗೆ ಮನವಿ ದೂರನ್ನು ಕೊಟ್ಟು ನಂತರ ಸೋರೆಬಾನ ಪೊಲೀಸ್ ಠಾಣೆಗೆ ಹೋಗಿ ಆತನ ಮೇಲೆ ( ಎಫ್ ಐ ಆರ್ ) ಮಾಡಿಸಲಾಯಿತು,
ವರದಿ : ಮಂಜುನಾಥ ಕಲಾದಗಿ




