ಸಿರುಗುಪ್ಪ : ಗುರುವಾರ ರಾತ್ರಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ನಿಧನದ ಗೌರವಾರ್ಥ ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮುಸ್ಲೀಂ ಬಾಂಧವರಿಂದ ಶುಕ್ರವಾರ ರಾತ್ರಿ ಮೇಣದ ಬತ್ತಿಯಿಂದ ದೀಪ ಬೆಳಗಿಸಿ ಶ್ರದ್ದಾಂಜಲಿ ಹಾಗೂ ಗೌರವ ಸಲ್ಲಿಸಲಾಯಿತು.
ಮುಖಂಡರಾದ ಚೌದ್ರಿ ಹಾರುನ್ ಸಾಬ್ ಅವರು ಮಾತನಾಡಿ 2004 ರಿಂದ 2014 ರವರೆಗೆ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿ ಅಭಿವೃದ್ದಿಗಾಗಿ ಶ್ರಮಿಸಿ ಹಲವಾರು ಯೋಜನೆಗಳ ಮೂಲಕ ಎಲ್ಲಾ ಜನಾಂಗದ ಏಳ್ಗೆಯ ಹರಿಕಾರರಾಗಿರುವ ಮನಮೋಹನ್ ಸಿಂಗ್ ಅವರ ನಿಧನದ ವಿಷಯವು ಇಡೀ ದೇಶಕ್ಕೆ ದು:ಖದ ವಿಷಯವಾಗಿದೆ.
ಅವರ ಕುಟುಂಬಕ್ಕೆ ಹಾಗೂ ನಮ್ಮ ದೇಶದ ಜನತೆಗೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ನಮ್ಮ ಮುಸ್ಲೀಂ ಸಮಾಜದ ಬಾಂಧವರಿಂದ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.
ಇದೇ ವೇಳೆ ಮುಖಂಡರಾದ ಹಮೀದ್ ಸಾಬ್, ಅಜೀಂ, ಚೌದ್ರಿ ಖಾಜಾಸಾಬ್, ಇಬ್ರಾಹಿಂಪುರ ಹಮೀದ್‌ಸಾಬ್, ಮಂಡಿ ಅಲ್ಲಾಸಾಬ್ ಹಾಗೂ ಇನ್ನಿತರ ಮುಸ್ಲೀಂ ಬಾಂಧವರಿದ್ದರು.
ವರದಿ : ಶ್ರೀನಿವಾಸ ನಾಯ್ಕ