ಚಿಟಗುಪ್ಪ: ತಾಲೂಕಿನ ಮುತ್ತಂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ರಾಚಪ್ಪ ಶಿವಪುತ್ರ ಸಾದಾ, ಉಪಾಧ್ಯಕ್ಷರಾಗಿ ಶಾಂತಬಾಯಿ ಚಂದ್ರಶೆಟ್ಟಿ ಅವರು ಅವಿರೋಧ ಆಯ್ಕೆಗೊಂಡಿದ್ದಾರೆ.ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಸಿದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮೃತುಂಜಯ ತಿಳಿಸಿದರು.

ನಂತರ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ರವಿಕುಮಾರ ಬಿರಾದಾರ್ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ನಿರ್ದೇಶಕರನ್ನು ಸನ್ಮಾನಿಸಿದರು.
ನೂತನ ಅಧ್ಯಕ್ಷ ರಾಚಪ್ಪ ಸಾದಾ ಮಾಧ್ಯಮ ಜೊತೆಗೆ ಮಾತನಾಡಿ,ಮುತ್ತಂಗಿ ಸಹಕಾರಿ ಸಂಘ ಮಾದರಿ ಸಹಕಾರ ಸಂಘ ಮಾಡುವುದು ನನ್ನ ಗುರಿಯಾಗಿದೆ.ಎಲ್ಲರ ಸಹಕಾರದಿಂದ ಸಂಘ ಮತ್ತು ರೈತರ ಹಿತಕ್ಕಾಗಿ ಹಗಲಿರಳು ಶ್ರಮಿಸುತ್ತೇನೆ ಎಂದು ಹೇಳಿದರು.
ಉಪಾಧ್ಯಕ್ಷೆ ಶಾಂತಬಾಯಿ ಚಂದ್ರಶೆಟ್ಟಿ ಮಾತನಾಡಿ, ನನಗೆ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಿದ ಎಲ್ಲರಿಗೂ ಆಭಾರಿ ಆಗಿರುತ್ತೇನೆ,ಎಲ್ಲರ ಸಹಕಾರದಿಂದ ರೈತರ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ವರದಿ:ಸಜೀಶ ಲಂಬುನೋರ




