ತುಮಕೂರು: ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ಮಾಡಿ ಶಾಕ್ ಕೊಟ್ಟ ಪ್ರಸಂಗ ಇಂದು ನಡೆದಿದೆ.
ತುಮಕೂರಿನ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಕುಳಿತು ಸಚಿವೆ ಜಿಲ್ಲಾಧಿಕಾರಿ ಮೊಬೈಲ್ ನಿಂದ ಕರೆ ಮಾಡುವ ಮೂಲಕ ಸಹಾಯವಾಣಿ ಕಾರ್ಯಕ್ಷಮತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ಎರಡನೇ ಭಾರಿಗೆ ಕರೆ ಸ್ವೀಕರಿಸಿದ ಸಹಾಯವಾಣಿ ಕೇಂದ್ರದ ಸಿಬ್ಬಂದಿಯ ಬಳಿ ನಾನು ಶಿರಾದಿಂದ ಕಾಲ್ ಮಾಡ್ತಿದ್ದೀನಿ. ಒಂದು ಸಮಸ್ಯೆಯಿದೆ, ನನ್ನ ಅತ್ತೆ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಸಹಾಯವಾಣಿ ಸಿಬ್ಬಂದಿಯು, ಬೆಳಗ್ಗೆ ಬಂದಿದ್ದವ್ರಾ ನೀವು ಎಂದು ಕೇಳಿದ್ದಾರೆ. ಆಗ ಸಚಿವೆ, ಇಲ್ಲ ನಾನು ಈಗಷ್ಟೇ ಕಾಲ್ ಮಾಡಿದ್ದೇನೆ ಎಂದಿದ್ದಾರೆ.
ಕೊನೆಗೆ ಕರೆ ಸ್ವೀಕರಿಸಿದ ಸಿಬ್ಬಂದಿಗೆ ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಪರಿಚಯ ಹೇಳಿಕೊಂಡ ಅವರು, ಸಹಾಯವಾಣಿ ಸಕ್ರಿಯವಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ನಂತರ ದಿನದ 24 ಗಂಟೆ ಸಹಾಯವಾಣಿ ಕೆಲಸ ಮಾಡುತ್ತದೆಯೇ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಅಧಿಕಾರಿಯನ್ನು ಸಚಿವೆ ಪ್ರಶ್ನಿಸಿದ್ದಾರೆ. ಸಹಾಯವಾಣಿ ವಿಭಾಗದಲ್ಲಿ ನಾಲ್ವರು ಕೆಲಸ ಮಾಡುತ್ತಾರೆ. ಹಗಲು-ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಾರೆ. ಸಹಾಯವಾಣಿಯ ದೂರವಾಣಿ 24 ಗಂಟೆ ಸಕ್ರಿಯವಾಗಿರುತ್ತೆ ಎಂದು ಅಧಿಕಾರಿ ತಿಳಿಸಿದ್ದಾರೆ.