Ad imageAd image

ಮ್ಯಾನ್ಮಾರ್ ಭೀಕರ ಭೂಕಂಪನ: ಭಾರತ ಸೇರಿ ಪ್ರಮುಖ ರಾಷ್ಟ್ರಗಳ ಸಹಾಯ ಹಸ್ತ

Bharath Vaibhav
ಮ್ಯಾನ್ಮಾರ್ ಭೀಕರ ಭೂಕಂಪನ: ಭಾರತ ಸೇರಿ ಪ್ರಮುಖ ರಾಷ್ಟ್ರಗಳ ಸಹಾಯ ಹಸ್ತ
WhatsApp Group Join Now
Telegram Group Join Now

ಶುಕ್ರವಾರ ಥಾಯ್ಲೆಂಡ್​ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಭೂಕಂಪದಿಂದಾಗಿ ಹಲವು ಬಹುಮಹಡಿ ಕಟ್ಟಡಗಳು ನೆಲಸಮವಾಗಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ವಿಪತ್ತು ಪೀಡಿತ ಪ್ರದೇಶದಲ್ಲಿ ಸಹಾಯ ಮಾಡಲು ಮತ್ತು ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಇಸ್ರೇಲ್ ಭಾನುವಾರದಿಂದ ಕಾರ್ಯಾಚರಣೆ ಕೈಗೊಂಡಿದೆ.

ಪ್ರಗತಿ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಇಸ್ರೇಲಿ ಕಂಪನಿಯಾದ ಕ್ಯಾಮೆರೊ-ಟೆಕ್‌ನ ತಂಡವು ಬ್ಯಾಂಕಾಕ್‌ನಲ್ಲಿನ ವಿಪತ್ತು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ ಮೊದಲ ಅಂತಾರಾಷ್ಟ್ರೀಯ ತಂಡವಾಗಿರುವುದು ಗಮನಾರ್ಹ. ತಮ್ಮ ಟೆಕ್ನಾಲಜಿ ಮೂಲಕ ಇಸ್ರೇಲ್​ ತಂಡವು ಬ್ಯಾಂಕಾಂಕ್​ನಲ್ಲಿ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದೆ. ಇಸ್ರೇಲ್​ ರಕ್ಷಣಾ ತಂಡ ಈ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

‘ಅವಶೇಷಗಳಡಿ 5 ಮೀಟರ್‌ಗಳಷ್ಟು ಕೆಳಗೆ ಸಿಲುಕಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ, ರಕ್ಷಿಸಿದ್ದೇವೆ’ ಎಂದು ಕ್ಯಾಮೆರೊ-ಟೆಕ್‌ನ ಮಾರ್ಕೆಟಿಂಗ್, ಮಾರಾಟ ಮತ್ತು ವ್ಯವಹಾರ ಅಭಿವೃದ್ಧಿಯ ಉಪಾಧ್ಯಕ್ಷ ಇಲಾನ್ ಅಬ್ರಮೊವಿಚ್ ಮಾಧ್ಯಮಕ್ಕೆ ತಿಳಿಸಿದರು.

ಗೋಡೆಗಳ ಮೂಲಕ ಜೀವದ ಚಿಹ್ನೆಗಳನ್ನು ಪತ್ತೆ ಮಾಡುವ ಅಡ್ವಾನ್ಸ್ಡ್​ ಕ್ಸೇವರ್ 400 ಸಿಸ್ಟಮ್​ ಅನ್ನು ಬಳಸಿಕೊಂಡ ತಂಡವು ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಗುರುತಿಸಲು ಸಾಧ್ಯವಾಯಿತು. ಜೀವದ ಚಿಹ್ನೆಗಳನ್ನು ಪತ್ತೆಹಚ್ಚಿದ ನಂತರ ತಂಡವು ತಕ್ಷಣವೇ ಥಾಯ್ ಅಧಿಕಾರಿಗಳ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಬಳಿಕ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರ ತಂದರು.

‘ಇಸ್ರೇಲಿ ತಂತ್ರಜ್ಞಾನವು ವಿಶ್ವಾದ್ಯಂತ ಜೀವಗಳನ್ನು ಉಳಿಸುವುದನ್ನು ನೋಡುವುದು ನಮಗೆ ಅಪಾರ ಹೆಮ್ಮೆ ಎನಿಸುತ್ತದೆ’ ಎಂದು ಅಬ್ರಮೊವಿಚ್ ಹೇಳಿದರು. ಉದ್ಯಮಿ ಸಮಿ ಕಾಟ್ಜ್ ನೇತೃತ್ವದಲ್ಲಿ, ಕ್ಯಾಮೆರೊ-ಟೆಕ್ ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಪತ್ತೆಹಚ್ಚಲು ಸಹಾಯ ಮಾಡಲು ತಜ್ಞರ ತಂಡದೊಂದಿಗೆ ಅಡ್ವಾನ್ಸ್ಡ್​ ಸರ್ಚ್​ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಕಳುಹಿಸಿತು.

ಯುದ್ಧಪೀಡಿತ ಮ್ಯಾನ್ಮಾರ್‌ನಲ್ಲಿ ಈ ವರ್ಷದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತ ಇದಾಗಿದ್ದು, ದೇಶದ ಮಿಲಿಟರಿ ಸರ್ಕಾರದ ಮುಖ್ಯಸ್ಥರು ತುರ್ತು ಪರಿಸ್ಥಿತಿಯನ್ನು ಘೋಷಿಸಲು ಕಾರಣವಾಯಿತು. ನೆರೆಯ ರಾಷ್ಟ್ರಗಳ ಸಹಾಯವನ್ನು ಕೋರಿದರು. ಸಹಾಯಕ್ಕಾಗಿ ಕರೆಗೆ ಸ್ಪಂದಿಸಿದ ಅತಿದೊಡ್ಡ ರಾಷ್ಟ್ರಗಳಲ್ಲಿ ಚೀನಾ, ರಷ್ಯಾ ಮತ್ತು ಭಾರತ ಸೇರಿವೆ.

WhatsApp Group Join Now
Telegram Group Join Now
Share This Article
error: Content is protected !!