ತುಮಕೂರು ಜಿಲ್ಲೆ. ಪಾವಗಡ: ತಾಲ್ಲೂಕಿನ ಗೊಲ್ಲ ಸಮುದಾಯದ ಪ್ರಭಾವಿ ನಾಯಕರು, ಜನಹಿತದ ಧ್ಯೇಯದೊಂದಿಗೆ ಬದುಕು ನಡೆಸುತ್ತಿರುವ, ಮಾಜಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾರ ರೆಡ್ಡಿಯವರು ತಮ್ಮ 46ನೇ ಜನ್ಮದಿನವನ್ನು ಮಂಗಳವಾರ ಅಭಿಮಾನ ಪೂರ್ವಕವಾಗಿ ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿದರು.
ಈ ವಿಶೇಷ ದಿನದ ಅಂಗವಾಗಿ ಮೈಲಾರ ರೆಡ್ಡಿ ಅಭಿಮಾನಿ ಬಳಗ”ದವರು ಪ್ರೀತಿಯಿಂದ ಸಿಹಿ ಹಂಚಿ, ತಮ್ಮ ನಾಯಕನಿಗೆ ಗೌರವ ಸಲ್ಲಿಸಿದರು.
ಸ್ನೇಹಜೀವಿ, ಸರಳ ಸ್ವಭಾವಿ, ಶಿಸ್ತುಬದ್ಧ ನಡವಳಿಕೆಯ ಮೂಲಕ ಜನರ ಮನ ಗೆದ್ದಿರುವ ಮೈಲಾರ ರೆಡ್ಡಿಯವರು, ಈ ಹೊತ್ತಿಗೆ ತಾಲ್ಲೂಕಿನ ಯುವಜನತೆಯ ನೈಜ ಪ್ರೇರಣೆಯಾಗಿದ್ದಾರೆ.
ಕಾರ್ಯಕ್ರಮದ ಸಂದರ್ಭದಲ್ಲಿ ಮೈಲಾರ ರೆಡ್ಡಿಯವರು ಮಾತನಾಡುತ್ತಾ,
“ನನ್ನನ್ನು ನೆನೆಯುವ ಪ್ರೀತಿ ತುಂಬಿದ ಹೃದಯಗಳು ನನ್ನ ಪಕ್ಕದಲ್ಲಿದ್ದರೆ, ಈ ಜನ್ಮ ಸಾರ್ಥಕವಾಗಿದೆ. ನನ್ನ ಮೇಲೆ ಅಪಾರ ವಿಶ್ವಾಸವಿಟ್ಟ ಎಲ್ಲಾ ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದರು.
ಈ ಕ್ಷಣದಲ್ಲಿ ಯೋಗೇಶ್ ಗುಂಡಾರ್ಲಹಳ್ಳಿ,
ಭರತ್ ಯಾದವ್, ಪಾಂಡು ಯಾದವ್, ನವೀನ್ ಕಿಲಾರ್ಲಹಳ್ಳಿ, ನಾಗರಾಜು ದೇವರಹಟ್ಟಿ, ದಿವ್ಯ ತೇಜ್ ಯಾದವ್, ಚಂದ್ರಮೌಳಿ, ಗೋಪಾಲ್ ಕೃಷ್ಣ, ಹನುಮಂತು, ಉಮೇಶ್, ಕೃಷಿ ಇಲಾಖೆಯ ಈರಣ್ಣ ಕೃಷ್ಣಗಿರಿ, ಸೇರಿದಂತೆ ಅನೇಕ ಹೃದಯದ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಶಿವಾನಂದ ಪಾವಗಡ