Ad imageAd image

ಲೇಖಕಿ ಬಾನು ಮುಷ್ತಾಕ್ ರಿಂದ ‘ಮೈಸೂರು ದಸರಾ’ಉದ್ಘಾಟನೆ : ಸಿದ್ದರಾಮಯ್ಯ

Bharath Vaibhav
ಲೇಖಕಿ ಬಾನು ಮುಷ್ತಾಕ್ ರಿಂದ ‘ಮೈಸೂರು ದಸರಾ’ಉದ್ಘಾಟನೆ : ಸಿದ್ದರಾಮಯ್ಯ
WhatsApp Group Join Now
Telegram Group Join Now

ಮೈಸೂರು : ಈ ಬಾರಿ ಲೇಖಕಿ ಬಾನು ಮುಷ್ತಾಕ್ ‘ಮೈಸೂರು ದಸರಾ’ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮೈಸೂರು ದಸರಾ ಉದ್ಘಾಟಿಸಲು ಮುಷ್ತಾಕ್ ಅವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ, ಅವರೇ ಈ ಬಾರಿ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ.ಕರ್ನಾಟಕದ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೋಷವಾಗಿದೆ ಎಂದರು.

ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ನಮ್ಮ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿರುವುದನ್ನು ಗಮನಿಸಿದೆ. ಇದು ಸತ್ಯಕ್ಕೆ ದೂರವಾದುದ್ದು. ಆ ರೀತಿಯ ಯೋಚನೆಯಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!