ರಾಮದುರ್ಗ: ಹೌದು ವೀಕ್ಷಕರೇ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 2025, 26 ನೇ ಸಾಲಿನ ದಿನಾಂಕ ಇದೇ ಸಪ್ಟೆಂಬರ್ ತಿಂಗಳಿನಲ್ಲಿರುವ 25,26,27ರಂದು ಮೂರು ದಿನಗಳಕಾಲ ನಡೆಯುತ್ತಿರುವ ದಸರಾ ಮಹೋತ್ಸವದ ಶ್ರೀ ಡಿ ದೇವರಾಜ್ ಅರಸ್ ವಿವಿದೋದ್ದೇಶ್ ಕ್ರೀಡಾಂಗಣ ವಸ್ತುಪ್ರದರ್ಶನ ಆವರಣ ದೊಡ್ಡಕೇರೆ ಮೈದಾನ ಮೈಸೂರು ಅಲ್ಲಿ ನಡೆದ 9ನೇ ವಿಶೇಷ ಚೇತನರ ಮಹಿಳೆಯರ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಬಂದಂತ ಪ್ರಥಮ ದ್ವಿತೀಯ ತೃತೀಯ ಸ್ಥಾನದಲ್ಲಿ.
ಪಂಜ ಕುಸ್ತಿಯಲ್ಲಿ ಪ್ರಥಮ ಸ್ಥಾನದಲ್ಲಿ ಗೋಲ್ಡ್ ಮೆಡಲ್ ತೆಗೆದುಕೊಂಡಿರುವ ಶ್ರೀಮತಿ ನೀಲಮ್ಮ ಬಾಗೇವಾಡಿ ಸಾಕಿನ್ ಶಿರಸಂಗಿ ತಾಲೂಕ ಸವದತ್ತಿ ಇವರು.
ಮತ್ತೊಂದು ಪ್ರಥಮ ಬೆಳ್ಳಿ ಪದಕ ಪಡೆದುಕೊಂಡಿರುವ ಕುಮಾರಿ ಯಲ್ಲಮ್ಮ ಗದಿಗೆಪ್ಪ ಉಪ್ಪಾರ ಸಾಕಿನ್ ಗೋವನಕೊಪ್ಪ ತಾಲೂಕ್ ಸವದತ್ತಿ.
ಮೈಸೂರು ದಸರಾ ಪ್ರಯುಕ್ತ ಸಿಟ್ಟಿಂಗ್ ಥ್ರೋ ಬಾಲ್ ತೃತೀಯ ಸ್ಥಾನ ಪಡೆದುಕೊಂಡಿರುವ ರೋಷನಬಿ ಇಮಾಮಭಾಯಿ ಗ್ರಾಮ ದೊಡ್ಡ ಹಂಪಿಹೊಳಿ ತಾಲೂಕ ರಾಮದುರ್ಗ.
ವಿಶೇಷ ಚೇತನರಲ್ಲಿ ವಿಶೇಷವಾಗಿ ಬೆಳಗಾವಿ ಜಿಲ್ಲೆಯವರು ಮೈಸೂರು ದಸರಾ ಒಡೆಯರ ಕಪ್ ಕ್ರೀಡಾಪಟದಲ್ಲಿ ಸವದತ್ತಿ ತಾಲೂಕಿನ ಹಾಗೂ ರಾಮದುರ್ಗ ತಾಲೂಕಿನವರು ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ಬಂದಿರುವವರಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವರದಿ: ಮಂಜುನಾಥ ಕಲಾದಗಿ




