ಶ್ರೀ ಲಕ್ಷ್ಮಿ ಆಗ್ರೋ ಟ್ರೇಡರ್ಸ್ ಶಾಹಪೂರದಲ್ಲಿ ನೋವ ಅಗ್ರಿಟೆಕ್ ಕಂಪನಿಯ ಕ್ರಿಮಿನಾಶಕ
ಚಿರ ನಿದ್ರೆಗೆ ಜಾರಿದ ಭ್ರಷ್ಟ ಕೃಷಿ ಅಧಿಕಾರಿಗಳು
ಯಾದಗಿರಿ: ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಶಹಪುರ್ ತಾಲೂಕಿನಲ್ಲಿ ಶ್ರೀ ಲಕ್ಷ್ಮಿ ಆಗ್ರೋ ಟ್ರೇಡರ್ಸ್ ಎಂಬ ಕ್ರಿಮಿನಾಶಕ ಅಂಗಡಿಯಿಂದರಲ್ಲಿ ನೋವಾ ಅಗ್ರಿ ಟೆಕ್ ಕಂಪನಿಯ ಜೈವಿಕ ಸುಡು ಬಯೋ ಹೆಸರಿನ ನಕಲಿ ಕ್ರಿಮಿನಾಶಕ ಹೆಗ್ಗಿಲ್ಲದೆ ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದು ಈಗಾಗಲೇ ಈ ಕಂಪನಿಯ ಮೇಲೆ ಈ ಹಿಂದೆ ರಾಯಚೂರು ಜಿಲ್ಲೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಬಂದ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಮುಂದೆ ರಾಯಚೂರು ಜಂಟಿ ನಿರ್ದೇಶಕರಿಗೆ ಕ್ರೀಮಿನಾಶಕ ನೀಡಿದ್ದು ಆ ವಿಷಯವು ಈಗ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣವು 1063ಪ್ರಕರಣ ಸಂಖ್ಯೆ ದಾಖಲಾಗಿದ್ದು ಜಂಟಿ ನಿರ್ದೇಶಕಿ ಆರ್ ದೇವಿಕಾ, ಸಹಾಯಕ ಕೃಷಿ ನಿರ್ದೇಶಕಿ ದೀಪಾ ಕುಲಕರ್ಣಿ, ಕೃಷಿ ಅಧಿಕಾರಿ ಮೇಘನಾ ಈ ಅಧಿಕಾರಿಗಳ ಮೇಲೆ ಅದು ಇನ್ನು ವಿಚಾರಣಾ ಹಂತದಲ್ಲಿದ್ದರೂ ನೋವ ಅಗ್ರಿಟೆಕ್ ಕಂಪನಿಯ ಮಾಲೀಕನು ರಾಜ ರೋಷವಾಗಿ ಯಾದಗಿರಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರೊಂದಿಗೆ ಮತ್ತು ಕೃಷಿ ಉಪ ನಿರ್ದೇಶಕರುಗಳೊಂದಿಗೆ’ ಮತ್ತು ಸಹಾಯಕ ಕೃಷಿ ನಿರ್ದೇಶಕ. ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳೊಂದಿಗೆ ಜಾಗೃತದಳ ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿಗಳೊಂದಿಗೆ ಶಾಮಿಲಾಗಿ ಶಹಪುರ್ ನಗರದಲ್ಲಿ ರಾಜರೊಷವಾಗಿ ಮಾರಾಟ ಮಾಡುತ್ತಿದ್ದು ಕೃಷಿ ಅಧಿಕಾರಿಗಳ ಶಾಮಿಲಗಿ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಮಾರಾಟ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈಗಲಾದರೂ ಸಂಬಂಧಪಟ್ಟ ಜಂಟಿ ಕೃಷಿ ನಿರ್ದೇಶಕರು. ಮತ್ತು ಉಪ ಕೃಷಿ ನಿರ್ದೇಶಕರು. ಮತ್ತು ಸಹಾಯಕ ಕೃಷಿ ನಿರ್ದೇಶಕರು. ಮತ್ತು ಜಾಗೃತದಳ ಸಹಾಯಕ ಕೃಷಿ ಅಧಿಕಾರಿಗಳು ರೈತರ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ಜೈವಿಕ ಸುಡೊ ಬಯೋ ಹೆಸರಿನ ನಕಲಿ ಕ್ರಿಮಿ ನಾಶಕ ಎನ್ ಕಟ್ ಎಂಬ ಕ್ರಿಮಿನಾಶಕದ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ.
ವರದಿ: ಗಾರಲದಿನ್ನಿ ವೀರನಗೌಡ




