Ad imageAd image

ನಾಡ ಪ್ರಭು ಶ್ರೀ ಕೆಂಪೇಗೌಡರ ಜಯಂತಿ ಉತ್ಸವ

Bharath Vaibhav
ನಾಡ ಪ್ರಭು ಶ್ರೀ ಕೆಂಪೇಗೌಡರ ಜಯಂತಿ ಉತ್ಸವ
WhatsApp Group Join Now
Telegram Group Join Now

ಹುಕ್ಕೇರಿ :-ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬರುವ ಯಲಹಂಕದ ಪಾಳೇಗಾರರಾಗಿದ್ದರು.ಹಂಪಿಯ ವೈಭವನ್ನು ಕಂಡು ಯಲಹಂಕವನ್ನು ದೊಡ್ಡ ನಗರವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಂಡು ಬೆಂಗಳೂರು ಎಂಬ ಮಹಾನಗರ ನಿರ್ಮಾಣ ಮಾಡಿದರು ವಿಶ್ವದಲ್ಲೇ ಎಲ್ಲ ನಗರಗಳಲ್ಲಿ ಅತೀ ಹೆಚ್ಚು ಕೆರೆಗಳು ಇರುವುದು ಬೆಂಗಳೂರಿನಲ್ಲಿ ಮಾತ್ರ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ ನಾಡಪ್ರಭು ಕೆಂಪೇಗೌಡರು ಎಂದು ಉಪನ್ಯಾಸಕರಾದ ಶ್ರೀಮತಿ ನಾಗಿಣಿ ಕೆ. ಸಿ. ಹಾಗೂ ತಶೀಲ್ದಾರ್ ಶ್ರೀಮತಿ ಮಂಜುಳಾ ನಾಯಕ ಅವರು ಹೇಳಲಾಯಿತು.\

ಸುಮಾರು 450 ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೆಗೌಡರಿಗೆ ಸಲ್ಲುತ್ತದೆ.

ಕೆಂಪೇಗೌಡರು ನಿರ್ಮಿಸಿದ ಎಲ್ಲಾ ಪೇಟೆಗಳು ಇಂದಿಗೂ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ವಾಣಿಜ್ಯ ವ್ಯವಹಾರದ ಮಹತ್ವವುಳ್ಳ ಪೇಟೆಗಳಾಗಿವೆ. ನಾಡಿನ ಇತಿಹಾಸದಲ್ಲಿ ಯಾವುದೇ ರಾಜರೂ ಸಹ ತಮ್ಮ ಅವಧಿಯಲ್ಲಿ ಇಷ್ಟು ಕೆರೆಗಳನ್ನು ಕಟ್ಟಿಸಿರುವುದು ಕಂಡುಬರುವುದಿಲ್ಲ. ಇದು ಕೆಂಪೇಗೌಡರ ಇವರ ಹೆಗ್ಗಳಿಕೆಯಾಗಿದೆ.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಟ್ಟು ಓದಬೇಕು. ನಿಮ್ಮ ಗುರಿ, ನಿಮ್ಮ ಸಾಧನೆ ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಹೆಜ್ಜೆ ಹಾಕಬೇಕು. ಶಿಕ್ಷಣವೇ ನಿಮ್ಮ ಆಯುಧ ಉನ್ನತ ಶಿಕ್ಷಣ ಪಡೆದು ದೇಶಕ್ಕೆ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಬೇಕು.

ಈ ಸಂದರ್ಭದಲ್ಲಿ,ಶ್ರೀ ಅಭಿನವ ಮಂಜುನಾಥ್ ಶ್ರೀಗಳು, ಶ್ರೀ ಮತಿ ಮಂಜುಳಾ ನಾಯಕ ತಶೀಲ್ದಾರರು ಹುಕ್ಕೇರಿ, ಮಹಾಂತೇಶ್ ಬಸಾಪುರೆ ಸಿ. ಪಿ. ಐ, ಪ್ರವೀಣ ಕಟ್ಟಿ ತಾಲೂಕ ಪಂಚಾಯತ್ ಕಾ. ನಿ. ಅಧಿಕಾರಿಗಳು ಹುಕ್ಕೇರಿ, ಶಶಿಧರ್ ಹೆಗ್ಡೆ ಎ. ಡಿ. ಎಲ್. ಆರ್. ಹುಕ್ಕೇರಿ, ಸವಿತಾ ಹಲಕಿ ಅಕ್ಷರ ದಾಸೋಹ ಹುಕ್ಕೇರಿ, ಹೊಳೆಪ್ಪಾ ಎಚ್. ಸಿ. ಡಿ. ಪಿ. ಓ. ಹುಕ್ಕೇರಿ, ಪ್ರಭಾವತಿ ಪಾಟೀಲ್ ಬಿ. ಇ. ಓ. ಹುಕ್ಕೇರಿ, ಎಸ್. ಆರ್. ಘಸ್ತಿ ಪ್ರಚಾರ್ಯರು ಡಿ. ಇಡಿ. ಕಾಲೇಜು, ನಾಗಿಣಿ ಕೆ. ಸಿ. ಪ್ರೌಢ ಶಾಲೆ ಅಮ್ಮಣಗಿ, ಶಿವಾನಂದ ಶೇಟ್ಟೆನ್ನವರ ನಿಲಯ ಪಾಲಕರು ಉಪಸ್ಥಿತರಿದ್ದರು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!