ಬೆಂಗಳೂರು : ದಿನಾಂಕ: ೨೬ ಜುಲೈ ೨೦೨೫ ರಂದು ಶನಿವಾರ ನಾಡಪ್ರಭು ಕೆಂಪೇಗೌಡ ಕಂಚಿನ ಸಾಂಸ್ಕೃತಿಕ ವೇದಿಕೆ (ರಿ ) ವತಿಯಿಂದ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರ ೫೧೬ನೇ ಜಯಂತೋತ್ಸವನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಂದ್ರಹಳ್ಳಿ ಮುಖ್ಯ ರಸ್ತೆ ಕೆಂಪೇಗೌಡ ವೃತ್ತದಲ್ಲಿ (ಸರ್ಕಲ್)ದಲ್ಲಿ ವಿನೂತನವಾಗಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ನಾಡ ಪ್ರಭು ಕೆಂಪೆಗೌಡರ ಜಯಂತಿಯನ್ನು ಆಚರಿಸಲಾಗುತ್ತದೆ.

ಈ ಒಂದು ಅರ್ಥಪೂರ್ಣ ಕಾರ್ಯ ಕ್ರಮಕ್ಕೆ ರಾಜಕಾರಣಿಗಳು, ಬುದ್ದಿಜೀವಿಗಳು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಶಾಲಾ ಶಿಕ್ಷಕರು ಶಿಕ್ಷಕಿಯರಿಗೆ ವಿದ್ಯಾರ್ಥಿಗಳು ಪೋಷಕರು ಸಮಸ್ತ ನಾಗರಿಕ ಬಂಧು ಭಗನಿಯರು ಭಾಗವಹಿಸಲಿದ್ದಾರೆ ಎಂದು ಬೃಂದಾವನ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅರುಣ್ ಬೈಲಪ್ಪ ಅವರು ಬಿ ವಿ ನ್ಯೂಸ್-5ಗೆ ತಿಳಿಸಿದ್ದಾರೆ.
ವರದಿ ಅಯ್ಯಣ್ಣ ಮಾಸ್ಟರ್




