ರಾಣೆಬೆನ್ನೂರು:- ಅಂಧ ಮಕ್ಕಳ ಬಾಳಿಗೆ ಬೆಳಕಾದ ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಶಾಲೆಯು ಕಳೆದ ಎಂಟು ವರ್ಷಗಳಿಂದ ಅಂಧ ಮಕ್ಕಳಿಗೆ ಶಿಕ್ಷಣ, ಊಟ ವಸತಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ತರಬೇತಿ ನೀಡಿ ಅಂಧ ಮಕ್ಕಳ ಬದುಕು ರೂಪಿಸುತ್ತಿದೆ. ಅಂಧರ ಜೀವ ಬೆಳಕು ಅಂಧ ಮಕ್ಕಳ ಶಾಲೆಯು ಸಾರ್ವಜನಿಕರ ಸಹಾಯ ಸಹಕಾರದಿಂದ ನಡೆದುಕೊಂಡು ಬಂದಿದ್ದು,ಸಂಸ್ಥೆಯನ್ನು ಮುನ್ನಡೆಸುತ್ತಿರುವರು ಕೂಡ ದೃಷ್ಟಿ ವಿಕಲಚೇತನರಾಗಿದ್ದಾರೆ.
ಇದುವರೆಗೂ ಸರಕಾರದ ಯಾವುದೇ ಅನುದಾನ ಪಡೆಯದೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಸಂಸ್ಥಾಪಕರಾದ ನಾಗನಗೌಡ ಬೆಳ್ಳುಳ್ಳಿ. ಇತ್ತಿಚೆಗೆ ಸಾರ್ವಜನಿಕರಿಂದ ಸಹಾಯ ಸಹಕಾರ ಕಡಿಮೆಯಾಗಿ ಆಶ್ರಮದ ನಿರ್ವಹಣೆ ತುಂಬಾ ಕ್ಲಿಷ್ಟಕರವಾಗಿದೆ.ಪ್ರಸ್ತುತ 25 ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳು ಆಶ್ರಮದಲ್ಲಿ ಆಶ್ರಯ ಪಡೆದಿದ್ದು ಆಶ್ರಮದ ಬಾಡಿಗೆ ಮತ್ತು ಮಕ್ಕಳಿಗೆ ಊಟ ವಸತಿಯ ವ್ಯವಸ್ಥೆಯನ್ನು ಮಾಡಲು ಸಾರ್ವಜನಿಕರ ಸಹಾಯ ಸಹಕಾರಕ್ಕೆ ಮೊರೆ ಹೋಗಿದ್ದಾರೆ.ಹುಟ್ಟು ಹಬ್ಬಗಳಂತಹ ಶುಭ ಸಮಾರಂಭಗಳಿಗೆ ದುಂಧು ವೆಚ್ಚಕ್ಕೆ ಕಡಿವಾಣ ಹಾಕಿ ನಮ್ಮಂತಹ ವಿಕಲಚೇತನ ಆಶ್ರಮಗಳಿಗೆ ಸಹಾಯ ಸಹಕಾರ ಮಾಡಿ ಎಂದು ನಾಗನಗೌಡ ಬೆಳ್ಳುಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:- ಮಂಜುನಾಥ ರಜಪೂತ