ಯಾದಗಿರಿ:-ಸಡಗರ ಸಂಭ್ರಮದಿಂದ ಶ್ರಾವಣ ಮಾಸದ ಶುಭ ಶುಕ್ರವಾರರಂದು ನಾಗರ ಪಂಚಮಿ ಹಬ್ಬವನ್ನು ಲಕ್ಷ್ಮಿ ನಗರದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ನಾಗಪ್ಪನ ನವಗ್ರಹ ಮೂರ್ತಿಗೆ ವಿವಿಧ ಬಗೆಯ ಹೂವಿನ ಅಲಂಕಾರ ಗೊಳಿಸಿ ನೂರಾರು ಮಹಿಳೆಯರು ಪ್ರತಿ ವರ್ಷದಂತೆ ಶ್ರಾವಣ ಮಾಸದ ಶುಕ್ರವಾರದ ಶುಭದಿನವಾದ ಇಂದಿನ ನಾಗರ ಪಂಚಮಿ ಹಬ್ಬವನ್ನು ಭಯ ಭಕ್ತಿಯೊಂದಿಗೆ ನಾಗಪ್ಪನ ಮೂರ್ತಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಡಗರ ಸಂಭ್ರಮದಿಂದ ಈ ವಿಶೇಷ ಹಬ್ಬವನ್ನು ಆಚರಿಸಿದರು.
ನಿತ್ಯ ದೇವಸ್ಥಾನದಲ್ಲಿ ದೇವಿಗೆ ವಿವಿಧ ಬಗೆಯ ಪೂಜೆ ಭಕ್ತಿಯ ಭಜನೆ ಮಹಾಭಿಷೇಕ ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಲಿದ್ದು ಇಲ್ಲಿನ ಲಕ್ಷ್ಮಿ ದೇವಿ ದೇವಸ್ಥಾನದ ಮಂಡಳಿಯವರು ಅಚ್ಚುಕಟ್ಟಾಗಿ ಪೂಜಾ ಕಾರ್ಯಕ್ರಮ ನೀಡುವ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಭಕ್ತಿಯ ಭಾವನಾತ್ಮಕ ಶಕ್ತಿಗಳನ್ನು ತುಂಬಿರುತ್ತಾರೆಂದು ಭಕ್ತರಾದ ಶೃತಿ, ಬೀದರ್ ಮಂಜುಳಾ ಅಂಗಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು ಇದಕ್ಕೂ ಮೊದಲು ದೇವಸ್ಥಾನಕ್ಕೆ ಬರುವ ಮುಂಚೆ ಮನೆಯಲ್ಲಿ ತಯಾರಿಸಿದ ಕಡ್ಲಿ ಉಂಡೆ ಶೇಂಗಾ ಉಂಡೆ ಉರುಣ ಕಡಬು ಎಳ್ಳು ಉಂಡೆ ಜೋಳದ ಕಡಲೆ ಕಾಳು ನೈವೆದ್ಯವನ್ನು ತಯಾರಿಸಿಕೊಂಡು ಬಂದು ದೇವರಿಗೆ ಹೆಡೆ ನೀಡುವ ಮೂಲಕ ಭಕ್ತಿಯ ಪ್ರಣಾಮಗಳನ್ನು ಅರ್ಪಿಸುತ್ತಾರೆ
ವರದಿ:- ಮಲ್ಲಿಕಾರ್ಜುನ ದೋಟಿಹಾಳ