ಹುಮನಾಬಾದ:ಕರ್ನಾಟಕದ ಪ್ರತಿಯೂಬ್ಬರು ಕನ್ನಡ ನಾಡು ನುಡಿಗೆ ಮೊದಲ ಆಧ್ಯತೆ ನೀಡಿ ಕನ್ನಡ ನೆಲ,ಜಲ ಸರ‍್ಷಣೆ ಮಾಡಬೇಕು ಎಂದು ಆರ್.ಹಿಬಾರೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ್ ಹಿಬಾರೆ ಹೇಳಿದರು.
ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ ಬಿ.ಪಟ್ಟಣದಲ್ಲಿರುವ ಆರ್.ಜಿ ಹಿಬಾರೆ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಕನ್ನಡ ಭಾಷೆಯ ಸಾಹಿತ್ಯ,ಸಂಸ್ಕೃತಿಯು ಮನುಷ್ಯನ ಜೀವನದಲ್ಲಿ ಒಂದು ಹೊಸ ಹುರುಪು ತುಂಬುವಂತಹದ್ದು,ವಿದ್ಯಾರ್ಥಿಗಳು ಜೀವನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಕನ್ನಡ ಮರೆಯಬಾರದು.ನಮ್ಮ ನಾಡಿನ ಸಂಗೀತ,ಸಾಹಿತ್ಯ, ಜಾನಪದ ನೃತ್ಯ,ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ನಂತರ ವಕೀಲರಾದ ಮಲ್ಲಿಕಾರ್ಜುನ ಪ್ರಭಾ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೀರೇಶ ರೆಡ್ಡಿ ಕೂಡ ಕನ್ನಡ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಮಂಡಳಿಯವರಾದ ಪೃತ್ವಿರಾಜ ಎನ್.ಹಿಬಾರೆ,ಮೇಘಾ ಎನ್.ಹಿಬಾರೆ, ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪಾವತಿ,ದೈಹಿಕ ಶಿಕ್ಷಣದ ಶಿಕ್ಷಕ ಶಿವಾನಂದ ಮೇತ್ರೆ ಸೇರಿ ಶಾಲೆಯ ಸಹ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ:ಸಜೀಶ ತಾಳಮಡಗಿ




