Ad imageAd image

ಬಿ. ಆರ್. ಸಿ. ಕಚೇರಿಯಲ್ಲಿ ನಲಿಕಲಿ ಶಿಕ್ಷಕರ ತರಬೇತಿ ಆಯೋಜನೆ..

Bharath Vaibhav
ಬಿ. ಆರ್. ಸಿ. ಕಚೇರಿಯಲ್ಲಿ ನಲಿಕಲಿ ಶಿಕ್ಷಕರ ತರಬೇತಿ ಆಯೋಜನೆ..
WhatsApp Group Join Now
Telegram Group Join Now

ಯಳಂದೂರು:ನಲಿ ಕಲಿ ವಿಧಾನದ ಮೂಲಕ ಬೋಧನೆ ಕಲಿಕೆ ಪ್ರಕ್ರಿಯೆಯು ಎಲ್ಲಾ ಮಕ್ಕಳಿಗೆ ಗುಣಮಟ್ಟದ ಕಲಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಬಿ.ಆರ್.ಸಿ.ನಂಜುಂಡಯ್ಯ ರವರು ತಿಳಿಸಿದರು.ಪಟ್ಟಣದ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳ ಕಚೇರಿಯಲ್ಲಿ 2024 25 ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಹಾಗೂ ಇಂಗ್ಲಿಷ್ ನಲಿ ಕಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ವೇಳೆ ಬಿ. ಆರ್. ಸಿ. ನಂಜುಂಡಯ್ಯ ರವರು ಮಾತನಾಡಿ ಇದು ಎಲ್ಲಾ ಮಕ್ಕಳಿಗೆ ಮೂಲಭೂತ ಮಟ್ಟದ ಕಲಿಕೆಯನ್ನು ಖಾತರಿಪಡಿಸುತ್ತದೆ, ಶಿಕ್ಷಕರು ಮತ್ತು ಪೀರ್ ಗುಂಪಿನ ಬೆಂಬಲದೊಂದಿಗೆ ಸ್ವಯಂ-ಪ್ರಾರಂಭಿಸಿದ, ಸ್ವಯಂ-ಗತಿಯ ಕಲಿಕೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ವಿಧಾನದಲ್ಲಿ, ಸಹಾಯಕರಾಗಿ ಶಿಕ್ಷಕರ ಪಾತ್ರವು ಬಹಳ ಮುಖ್ಯವಾಗಿದೆ,ಆದ್ದರಿಂದ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬ ನಲಿ-ಕಲಿ ಶಿಕ್ಷಕರನ್ನು ತಲುಪುವುದು ಒಳಿತು,ಸಾಕಷ್ಟು ಹೋರಾಟದ ನಂತರ, ಬೋಧನೆ-ಕಲಿಕೆ ಪ್ರಕ್ರಿಯೆಯತ್ತ ಗಮನ ಹರಿಸಿದಾಗ ಮಾತ್ರ ಮಕ್ಕಳ ಶಿಕ್ಷಣ ಮಟ್ಟ ಸುಧಾರಿಸುತ್ತದೆ ಮತ್ತು ಅದು ನಲಿ-ಕಲಿ ವಿಧಾನದಿಂದ ಸಾಧ್ಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ಗುಣಮಟ್ಟದ ಶಿಕ್ಷಣವನ್ನು ಇದರ ಮೂಲಕ ಪ್ರತಿ ಮಗುವಿಗೆ ತಲುಪುವಂತೆ ಮನವರಿಕೆ ಮಾಡಬೇಕು.ಈ ಸಂದರ್ಭದಲ್ಲಿ ಸಂಪನ್ಮೂಲ ಶಿಕ್ಷಕರಾದ ವಿಶಾಲಾಕ್ಷೆ , ಸುಮಿತ್ರಾ, ಸೌಮ್ಯ, ವಿನುತಾ, BRP ಪುಷ್ಪಲತಾ, ಸತೀಶ್, ರಂಗಸ್ವಾಮಿ, ತಾಲ್ಲೂಕಿನ ಎಲ್ಲಾ ಶಾಲೆಯ ನಲಿಕಲಿ ಶಿಕ್ಷಕರು ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!