ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ನಟನೆಯ 2007 ರಲ್ಲಿ ತೆರೆಕಂಡಿದ್ದ ಬ್ಲಾಕ್ಬಸ್ಟರ್ ಚಿತ್ರ ‘ನಮಸ್ತೆ ಲಂಡನ್‘ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ತೆರೆಕಾಣಲು ಸಿದ್ಧವಾಗಿದೆ ಏಕೆಂದರೆ ಅದು ಹೋಳಿ, ಮಾರ್ಚ್ 14 ರಂದು ಮರು–ಬಿಡುಗಡೆಯಾಗಲಿದೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ನಟ ಅಕ್ಷಯ್ ಕುಮಾರ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
‘ಈ ಹೋಳಿ ಹಬ್ಬ, ಮಾರ್ಚ್ 14 ರಂದು ನಮಸ್ತೆ ಲಂಡನ್ ಚಿತ್ರವು ದೊಡ್ಡ ಪರದೆ ಮೇಲೆ ರೀರಿಲೀಸ್ ಆಗಲಿದೆ ಎಂದು ಘೋಷಿಸಲು ರೋಮಾಂಚನಗೊಂಡಿದ್ದೇನೆ! ಈ ಮ್ಯಾಜಿಕ್ ಅನ್ನು ಬೆಳ್ಳೆ ಪದರೆ ಮೇಲೆ ನೋಡಲು ಸಿದ್ಧರಾಗಿ. ಮರೆಯಲಾಗದ ಹಾಡುಗಳು, ಸಾಂಪ್ರದಾಯಿಕ ಸಂಭಾಷಣೆಗಳು ಮತ್ತು ಕತ್ರೀನಾ ಕೈಫ್ ಅವರೊಂದಿಗಿನ ಟೈಮ್ಲೆಸ್ ರೊಮ್ಯಾನ್ಸ್ ಅನ್ನು ಮತ್ತೊಮ್ಮೆ ನೋಡಿ. ಚಿತ್ರಮಂದಿರಗಳಲ್ಲಿ ಮತ್ತೆ ಭೇಟಿಯಾಗೋಣ!’ ಎಂದು ಬರೆದಿದ್ದಾರೆ.
‘ನಮಸ್ತೆ ಲಂಡನ್‘ ಚಿತ್ರವು ವಿಪುಲ್ ಅಮೃತಲಾಲ್ ಶಾ ನಿರ್ದೇಶಿಸಿದ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಆಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕೈಫ್ ಜೊತೆಗೆ ರಿಷಿ ಕಪೂರ್, ನೀನಾ ವಾಡಿಯಾ, ಜಾವೇದ್ ಶೇಖ್, ಉಪೇನ್ ಪಟೇಲ್ ಮತ್ತು ಕ್ಲೈವ್ ಸ್ಟಾಂಡೆನ್ ನಟಿಸಿದ್ದಾರೆ. ಚಿತ್ರವು ಮೂಲತಃ ಅಕ್ಷಯ್ ಸ್ನೇಹಿತನ ನಿಜ ಜೀವನದ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ರಿತೇಶ್ ದೇಶಮುಖ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.




