Ad imageAd image

ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆಗೈದ ನಂದವಾಡಗಿ ಶಾಲೆ

Bharath Vaibhav
ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮ ಸಾಧನೆಗೈದ ನಂದವಾಡಗಿ ಶಾಲೆ
WhatsApp Group Join Now
Telegram Group Join Now

ಇಲಕಲ್:-ನಂದವಾಡಗಿ ೧೮ : ಬಾಗಲಕೋಟೆ ಜಿಲ್ಲೆಯ ಹುನಗುಂದ /ಇಲಕಲ್ ತಾಲೂಕಿನ ಸ ಹಿ ಪ್ರಾ ಶಾಲೆ ಗೋನಾಳ (ಎಸ್ ಕೆ ) ದಲ್ಲಿ ನಡೆದ ನಂದವಾಡಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿ ಶಾಲೆಯು ವಿಶೇಷ ಸಾಧನೆಗೈದಿದೆ. ಅತ್ಯುತ್ತಮವಾಗಿ ಜರುಗಿದ ಈ ಒಂದು ಪ್ರತಿಭಾ ಕಾರಂಜಿಯಲ್ಲಿ ನಂದವಾಡಗಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಾದ ಅನುಷಾ ಗುರಿಕಾರ, ಸಂಜನಾ ಹೊರಗಿನಮನಿ, ಬಸಮ್ಮ ಹಂಚಿನಾಳ, ಭಾಗ್ಯವಂತಿ ಕಾಜಗಾರ, ಭಾಗ್ಯ ಈಟಿ, ಯಮನಮ್ಮ ಫಲದಿನ್ನಿ, ರಕ್ಷಿತಾ ಕುರಿ, ಹುಲಿಗೆಮ್ಮ ಮಾದರ, ಶಿಲ್ಪಾ ಪಾಲ್ತಿ ಪ್ರಥಮ ಸ್ಥಾನ ಪಡೆದರು, ಕವಿತಾ ಕಟಾoಬ್ಳಿ, ನೀಲಮ್ಮ ಮಠ, ಅಮೀನಾ ಹುನಕುಂಟಿ, ಸನಾ ಭಾವಿಕಟ್ಟಿ, ದುರ್ಗಮ್ಮ ಮಾದರ, ದ್ವಿತೀಯ ಸ್ಥಾನ ಪಡೆದರು, ಸಂಜನಾ ಕಟಾoಬ್ಳಿ, ಅಪೂರ್ವ ಕಟಗಿ, ಭೂಮಿಕಾ ಗೌಡರ, ಸಂಜನಾ ಹೊರಗಿನಮನಿ, ಹುಲಿಗೆಮ್ಮ ಲೆಕ್ಕಿಹಾಳ ಹಾಗೂ ರಸ ಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಅತ್ಯುತ್ತಮವಾಗಿ ಆಯೋಜನೆ ಮಾಡಿದ ಗೋನಾಳ (ಎಸ್ ಕೆ ) ಶಾಲೆಯ ಮುಖ್ಯಗುರುಗಳು ಶ್ರೀ ಮಹಾಂತೇಶ ಅರಹುಣಸಿ, ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರಿಗೆ, ಎಸ್ ಡಿ ಎಂ ಸಿ ಸರ್ವ ಸದಸ್ಯರಿಗೆ, ನಿರ್ಣಾಯಕರಿಗೆ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಶಾಂತಕುಮಾರ ಕೆ ರವರಿಗೆ ಶಾಲಾ ಹಾಗೂ ಕ್ಲಸ್ಟರ್ ವತಿಯಿಂದ ಅಭಿನಂದನೆ ಸಲ್ಲಿಸಿರುತ್ತಾರೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅತ್ಯುತ್ತಮವಾಗಿ ಸಾಧನೆ ಮಾಡಿದ ಎಲ್ಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಸದಸ್ಯರು, ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆ ವಿ ಬಿ ಕುಂಬಾರ, ಸಹ ಶಿಕ್ಷಕಿಯರಾದ ಜ್ಯೋತಿ, ಜಿ ಆರ್ ನದಾಫ್, ಕುಮಾರಿ ಅಶ್ವಿನಿ ಕಪ್ಪರದ, ಸಹ ಶಿಕ್ಷಕರಾದ ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಚಂದ್ರಶೇಖರ ಹುತಗಣ್ಣ, ಶಾಲಾ ಮಂತ್ರಿ ಮಂಡಲ, ವಿದ್ಯಾರ್ಥಿನಿಯರು, ನಂದವಾಡಗಿ ಗ್ರಾಮದ ಗುರು ಹಿರಿಯರು, ಯುವಕರು, ಶಿಕ್ಷಣ ಪ್ರೇಮಿ ಗೋಪಿ ಶಿಂಧೆ ಅಭಿನಂದಿಸಿದ್ದಾರೆ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!