Ad imageAd image

ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ : ನಾಳೆಯಿಂದ ಹೊಸ ದರ ಜಾರಿ

Bharath Vaibhav
ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ : ನಾಳೆಯಿಂದ ಹೊಸ ದರ ಜಾರಿ
WhatsApp Group Join Now
Telegram Group Join Now

ಬೆಂಗಳೂರು : ಸೋಮವಾರದಿಂದ ಅಂದರೆ ನಾಳೆಯಿಂದ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆ ಶೇ. 12ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದ್ದು, ಇದರ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ನಂದಿನಿ ತುಪ್ಪ, ಬೆಣ್ಣೆ, ಚೀಸ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ.

ಆದೇಶದಲ್ಲಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆಯಿಂದಾಗಿ ‘ನಂದಿನಿ’ ಹಾಲಿನ ಉತ್ಪನ್ನಗಳ ಮಾರಾಟ ದರ ಪರಿಷ್ಕರಣೆ ಮಾಡಿರುವ ಬಗ್ಗೆ.ಕೇಂದ್ರಸರ್ಕಾರವು ಸಾರ್ವಜನಿಕರ ದೈನಂದಿನ ಬಳಕೆಯ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಇಳಿಕೆ ಮಾಡಿದ್ದು ದಿನಾಂಕ: 22.09.2025 ರಿಂದ ಕಡ್ಡಾಯವಾಗಿ ಎಲ್ಲಾ ಆಹಾರ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳು ಜಾರಿಗೊಳಿಸುವಂತೆ ತಿಳಿಸಲಾಗಿದೆ. ಅದರಂತೆ ಕೆಎಂಎಫ್ ಸಂಸ್ಥೆಯ ನಂದಿನಿ ಉತ್ಪನ್ನಗಳ ಮಾರಾಟ ದರ ಪರಿಷ್ಕರಣೆ ಮಾಡಲಾಗಿದ್ದು, ವಿವರಗಳು ಈ ಕೆಳಕಂಡಂತಿದೆ.

1000 ಮಿಲಿ ಲೀಟರ್ ತುಪ್ಪ ಹಳೆಯ ದರ 650 ಇದ್ದರೆ, ಹೊಸ ದರ 610 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು 500 ಮಿಲಿ ಲೀಟರ್ ಬೆಣ್ಣೆ ಹಳೆಯ ದರ 306 ಇದ್ದರೆ ಹೊಸದರ 286 ರೂಪಾಯಿ ಇದೆ. ಇನ್ನು 1000 ಗ್ರಾಮ ಪನೀರ್ ಹಳೆಯ ದರ 425 ಇದ್ದರೆ, ಹೊಸ ದರ 408 ರೂಪಾಯಿ ಇದೆ.

ಒಂದು ಲೀಟರ್ ಗುಡ್ ಲೈಫ್ ಹಾಲು, ಹಳೆಯ ದರೆ ರೂ.70 ಇದ್ದರೆ, ಹೊಸದರ 68 ರೂಪಾಯಿ ಇದೆ. ಚೀಸ್ ಒಂದಕ್ಕೆ ಹಳೆಯದರ 480 ಇದ್ದರೆ ಹೊಸದರ 450 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯದರ 530 ಇದ್ದರೆ ಹೊಸದರ 497ಕ್ಕೆ ಇಳಿಕೆ ಮಾಡಲಾಗಿದೆ.

ಇನ್ನು ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡುವ ವಿಚಾರವಾಗಿ ಹಾಲು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಲಿನ ಉತ್ಪನ್ನಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಕೆಎಂಎಫ್ ಎಮ್.ಡಿ ಶಿವಸ್ವಾಮಿ ಹೇಳಿಕೆ ನೀಡಿದರು.

ಅನ್ವಯ ಒಂದಷ್ಟು ಉತ್ಪನ್ನಗಳ ದರ ಇಳಿಸಿದ್ದೇವೆ. ಸೆಪ್ಟೆಂಬರ್ 22 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಮಾರಾಟಗಾರರು ಹಾಗೂ ಗ್ರಾಹಕರು ಯಾವುದೇ ಕಾರಣಕ್ಕೂ ಗೊಂದಲವಾಗಬೇಡಿ. ಸೆಪ್ಟೆಂಬರ್ 21ರ ತನಕ ಹಳೆದರ ಮುಂದುವರೆಯುತ್ತದೆ ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!