ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪು ಈಗಾಗಲೇ ತಿರುಪತಿ ತಿರುಮಲ ಪ್ರಸಾದವಾಗಿರುವಂತ ಲಡ್ಡು ಪ್ರಸಾದ ತಯಾರಿಕೆಗೆ ಸರಬರಾಜು ಆಗುತ್ತಿದೆ. ಈಗ ದೆಹಲಿಗೂ ಕರುನಾಡಿನ ಹೆಮ್ಮೆಯ ನಂದಿನಿ ಕಾಲಿಡುತ್ತಿದೆ. ಇದೇ ನವೆಂಬರ್ 21 ರಂದು ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆಗೊಳ್ಳಲಿದೆ.
ದೆಹಲಿಯಲ್ಲಿ ಕೆಎಂಎಫ್ ಔಟ್‍ಲೆಟ್‍ಗೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಡಲಿದ್ದಾರೆ. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ಕೆಎಂಎಫ್ ಮುಂದಾಗಿದೆ.
ಹಸುವಿನ ಹಾಲು ಪೂರೈಸುವಂತೆ ಕೆಎಂಎಫ್‍ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಈ ಸಂಬಂಧ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಕೆಎಂಎಫ್ ಮಾತುಕತೆ ನಡೆಸುತ್ತಿತ್ತು.
ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳನ್ನು ಈಗಾಗಲೇ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ. ಕರ್ನಾಟಕದ ಜಿಲ್ಲೆ, ತಾಲ್ಲೂಕು ವಿಭಾಗದಲ್ಲೂ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳಿದ್ದಾವೆ.
ಈಗ ದೆಹಲಿಯಲ್ಲೂ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಓಪನ್ ಆಗಲಿದೆ. ಈ ಮೂಲಕ ದೆಹಲಿಯಲ್ಲೂ ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ಲಭ್ಯವಾಗುವಂತೆ ಆಗಲಿದೆ.