ನಂಜನಗೂಡು: ಭಾರತ ದೇಶದಲ್ಲೇ ಪ್ರಥಮ ಬಾರಿಗೆ ನಂಜನಗೂಡಿನ ನಗರಸಭೆ ಕ್ಯೂ ಆರ್ ಕೋಡ್ ಅನ್ನು ಅಳವಡಿಸಿ ಪಟ್ಟಣದ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಗರಸಭಾ ವತಿಯಿಂದ ನಗರಸಭೆಯ 31 ವಾರ್ಡ್ಗಳಲ್ಲಿ ಕ್ಯೂಆರ್ ಕೋಡ್ ಸೌಲಭ್ಯ ಹೊಂದಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ನಂಜನಗೂಡು ನಗರಸಭಾ ಸಭೆಯು ರಾಜ್ಯದ ಮೊದಲ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಇದು ಇತಿಹಾಸದಲ್ಲೇ ಮೊದಲ ನಗರಸಭೆಯಾಗಿದೆ.
ಅಶೋಕ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಅಭಿವೃದ್ಧಿ ಪಡೆಸಿದ ಈ ಕ್ಯೂ ಆರ್ ಕೋಡ್ ನಗರದ ಪ್ರತಿಯೊಂದು ವಾರ್ಡ್ ಗಳಲ್ಲೂ ನಾಗರಿಕರಿಗೆ ಈ ಸೌಲಭ್ಯ ಸಹಕಾರಿಯಾಗಿದೆ . ನಗರಸಭಾ ಅಧಿಕಾರಿಗಳು ಮತ್ತು ನಾಗರಿಕರ ಸಂಪರ್ಕವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ಕ್ಯೂಆರ್ ಕೋಡ್ ಬಹಳ ಪ್ರಯೋಜನಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ನಂಜನಗೂಡು ಪಟ್ಟಣವುಇಂತಹ ತಂತ್ರಜ್ಞಾನ ಬಳಕೆ ಮಾಡಿ ಪಟ್ಟಣನ್ನು ಮತ್ತಷ್ಟು ಉನ್ನತಿ ಸಾಧಿಸಲು ನೆರವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಶೋಕ ವಿಶ್ವವಿದ್ಯಾನಿಲಯದ ಮುಖ್ಯಸ್ಥ ಐಶ್ವರ್ಯ ಸುನಂದ್, ಮಾಜಿ ಶಾಸಕ ಮೂರ್ತಿ ಕಳಲೆ ಕೇಶವಮೂರ್ತಿ,ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ’ ಸೇರಿದಂತೆ ಉಪಾಧ್ಯಕ್ಷರು,ನಗರಸಭಾ ಸದಸ್ಯರು,ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಆನಂದ್ ವಡಗೆರೆ




