ನರಸಿಂಹಪ್ಪ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬರ್ಬರ ಕೊಲೆ

Bharath Vaibhav
ನರಸಿಂಹಪ್ಪ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬರ್ಬರ ಕೊಲೆ
WhatsApp Group Join Now
Telegram Group Join Now

ಪಾವಗಡ. ಕೆ. ಟಿ. ಹಳ್ಳಿ ಗ್ರಾಮ ಪಂಚಾಯಿತಿಯ ದೇವಲಕೆರೆ ಗ್ರಾಮವಾಸಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹಪ್ಪರವರು ದೇವಲಕೆರೆ ಗ್ರಾಮದ ತಿಪ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಮೇಕೆ ಮೇಯಿಸಲು ಹೋದಾಗ ದೇವಲಕೆರೆ ಗ್ರಾಮದ ಪಕ್ಕದ ಗ್ರಾಮ ಕರೆಯಮ್ಮನಪಾಳ್ಯ ವಾಸಿ, ಮಣಿಕಂಠ ಎನ್ನುವ ವ್ಯಕ್ತಿಯು ಶುಕ್ರವಾರ ಮಧ್ಯಾಹ್ನ ಕುಡುಗೋಲಿನಿಂದ ಕುತ್ತಿಗೆಗೆ ಹಾಗೂ ಎಡಗೈ ಬೆರಳುಗಳನ್ನು ಕತ್ತರಿಸಿ ಸಾಯಿಸಿ ಸುಮಾರು 30 ಮೇಕೆಗಳನ್ನು ಹೊಡೆದುಕೊಂಡು ಹೋಗಿ ಶನಿವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೇಕೆ ಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ನರಸಿಂಹಪ್ಪರ ಅವರ ಮಗ ಮಂಜುನಾಥ್ ರವರು ಹೋಗಿ ಮೇಕೆಗಳನ್ನು ಗುರುತಿಸಿ ಮಣಿಕಂಠನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದಾಗ ಅರಸೀಕೆರೆ ಪೊಲೀಸ್ ಠಾಣೆ ಅವರು ಹಿರಿಯೂರಿನಿಂದ ಆರೋಪಿಯನ್ನು ಬಂಧಿಸಿ ತಂದು ವಿಚಾರಣೆ ನಡೆಸಿದಾಗ ಆರೋಪಿಯು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ನರಸಿಂಹಪ್ಪನನ್ನು ಹಾಕಿರುವ ಪ್ರದೇಶಕ್ಕೆ ಕರೆತಂದು ತೋರಿಸಿರುತ್ತಾನೆ, ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಶ್ರೀಯುತರು ಇಬ್ಬರು ಗಂಡು ಮಕ್ಕಳ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಗಣ್ಯರು ಸಂತಾಪ ನಿಡಗಲ್ಲು ವಾಲ್ಮೀಕಿ ಆಶ್ರಮದ ಸ್ವಾಮೀಜಿ ಸಂಜಯ್ ಕುಮಾರ್ ಸ್ವಾಮೀಜೀ. ಮಾಜಿ ಸಚಿವರಾದ ವೆಂಕಟರಮಣಪ್ಪ. ಶಾಸಕರಾದ ಎಚ್. ವಿ. ವೆಂಕಟೇಶ್. ಪುರಸಭೆ ಅಧ್ಯಕ್ಷ ರಾಜೇಶ್. ಅಖಿಲಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಪಾಳೇಗಾರ್ ಲೋಕೇಶ್ . ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಸಿದ್ಗಂಗಪ್ಪ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆದಿ ಲಕ್ಷ್ಮಿ ನರಸಿಂಹ ನಾಯ್ಕ. ಮುಖಂಡರುಗಳಾದ ಭಾಸ್ಕರ್ ನಾಯಕ. ಅನಂತಯ್ಯ. ಗಾಡಿ ಮಂಜುನಾಥ್. ಮುಂತಾದವರು ಸಂತಾಪ ಸೂಚಿಸಿದ್ದಾರೆ

ವರದಿ: ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!