Ad imageAd image

ಸಮರ್ಪಕ ವಿದ್ಯುತ್ ನೀಡುವುದಾಗಿ ಭರವಸೆ – ಬೆಸ್ಕಾಂನ ಮುಖ್ಯ ಅಧಿಕಾರಿ ನಾರಾಯಣಸ್ವಾಮಿ

Bharath Vaibhav
ಸಮರ್ಪಕ ವಿದ್ಯುತ್ ನೀಡುವುದಾಗಿ ಭರವಸೆ – ಬೆಸ್ಕಾಂನ ಮುಖ್ಯ ಅಧಿಕಾರಿ ನಾರಾಯಣಸ್ವಾಮಿ
WhatsApp Group Join Now
Telegram Group Join Now

ಬೆಂಗಳೂರು: ನಡಕೇರಪ್ಪ ಮತ್ತು ಭೈರವೇಶ್ವರ ಕೈಗಾರಿಕಾ ಪ್ರದೇಶದಲ್ಲಿ ದಿನ ದಿನಕ್ಕೆ ವಿದ್ಯುತ್ ಲೋಡ್ ಸೆಟ್ಟಿಂಗ್ ಹಾಗೂ ವಿದ್ಯುತ್ ದುರಸ್ತಿ ಹೀಗೆ ಹಲವು ತೊಂದರೆಗಳಿಗೆ ಕಾರಣವಾಗಿದ್ದರಿಂದ ತೊಂದರೆಗಳನ್ನು ಸರಿಪಡಿಸುವ ಉದ್ದೇಶದಿಂದ ಇಲ್ಲಿನ ಕಂಪನಿಗಳ ಮಾಲೀಕರು ಕರೆದ ಸಭೆಗೆ ಈ ಭಾಗದ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿ ಬೆಸ್ಕಾಂನ ಮುಖ್ಯ ಅಧಿಕಾರಿ ನಾರಾಯಣಸ್ವಾಮಿ ಹೇಳಿದರು

ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಡಕೇರಪ್ಪ ಮತ್ತು ಭೈರವೇಶ್ವರ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ನ ಲೋಡ್ ಸೇಡಿಂಗ್ ಕಂಪನಿಯ ಮಾಲೀಕರು ರೋಚ್ಚಿಗೆಳುವ ಪರಿಸ್ಥಿತಿ ನಿರ್ಮಾಣ ಆಗುವ ಹಂತಕ್ಕೆ ಬಂದಂತೆ ಆಗಿತ್ತು ಒಂದು ಕಡೆ ತಮ್ಮ ಗ್ರಾಹಕರ ಉತ್ಪನ್ನಗಳನ್ನು ವಿನ್ಯಾಸಗಳು ಸರಿಯಾದ ಸಮಯಕ್ಕೆ ಸರಬರಾಜು ಆಗದೆ ಬಹಳ ತೊಂದರೆ ಅನುಭವಿಸುತ್ತಿದ್ದು. ಕಾರಣ ಎಫ್ ಕೆ ಸಿಸಿ ಡೈರೆಕ್ಟರ್ ಮತ್ತು ವಿಜ್ಞೇಶ್ ವಿದ್ಯುತ್ ಕಂಟ್ರೋಲರ್ಸ್ ಮಾಲೀಕ ಬಿ. ಮುರುಳಿ ಕೃಷ್ಣ ಮತ್ತು ಎಸ್. ಬಿ. ಜಿ. ಟೂಲಿಂಗ್ ಕಂಪನಿ ಮಾಲೀಕರಾದ ವಿನೋದ್ ಇವರ ನೇತೃತ್ವದಲ್ಲಿ ಬೆಸ್ಕಾಂ ಇಲಾಖೆ ಮತ್ತು ಅಧಿಕಾರಿಗಳ ನಿರ್ಲಕ್ಷಗಳ ವಿರುದ್ಧ ಹಲವಾರು ಕಂಪನಿಗಳ ಕಾರ್ಮಿಕ ರೊಟ್ಟಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಇದನ್ನರಿತ ಬೆಸ್ಕಾಂ ಅಧಿಕಾರಿಗಳ ತಂಡ ತುರ್ತಾಗಿ ನಡಕೇರಪ್ಪ ಮತ್ತು ಭೈರವೇಶ್ವರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಹಲವು ಕಂಪನಿಗಳ ಮಾಲೀಕರ ಸಭೆಯನ್ನು ಕರೆದು ವಿದ್ಯುತ್ ತೊಂದರೆಗಳ ಬಗ್ಗೆ ಚರ್ಚಿಸಲಾಯಿತು ನಂತರ ಬೆಸ್ಕಾಂನ ಮುಖ್ಯ ಅಧಿಕಾರಿ ನಾರಾಯಣಸ್ವಾಮಿ ಇನ್ನು ಮುಂದೆ ಯಾವುದೇ ತೊಂದರೆ ಆಗದಂತೆ ಒಂದು ತಿಂಗಳ ಕಾಲದಲ್ಲಿ ತುರ್ತಾಗಿ ಸಮರ್ಪಕವಾಗಿ ಯಾವುದೇ ಕೊರತೆಯಾಗದಂತೆ ವಿದ್ಯುತ್ ಅನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ನಂತರ ಮಾತನಾಡಿದ ಮುರಳಿ ಕೃಷ್ಣ ವಿದ್ಯುತ್ ನಿಗಮದಿಂದ ನಮ್ಮ ಕಂಪನಿಗಳಿಗೆ ಮತ್ತು ನಮಗೆ ಬಹಳ ನಷ್ಟ ಉಂಟಾಗುತ್ತಿದೆ ಅದಲ್ಲದೆ ನಮ್ಮ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಸ್ತುಗಳನ್ನು ಅವರಿಗೆ ಒದಗಿಸುವಲ್ಲಿ ಕಂಪನಿಯಿಂದ ವಿಳಂಬ ಆದ್ದರಿಂದ ಗ್ರಾಹಕರು ಬೇರೆ ಕಂಪನಿ ಕಡೆ ಮುಖಮಾಡಿದರೆ ಕಂಪನಿ ಮಾಲೀಕರಿಗೆ ಮತ್ತು ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಆಗುತ್ತದೆ ಎಂದು ಕಂಪನಿ ಮಾಲೀಕರು ಬೆಸ್ಕಾಂ ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಅದಕ್ಕೆ ಮಣಿದು ವಿದ್ಯುತ್ತನ್ನು ಒದಗಿಸುತ್ತೇವೆಂದು ಎಂದು ಬೆಸ್ಕಾಂ ಅಧಿಕಾರಿ ನಾರಾಯಣಸ್ವಾಮಿ
ಭರವಸೆ ನೀಡಿದರು.
ಎಸ್ . ಬಿ. ಜಿ. ಕೂಲಿಂಗ್ ಮಾಲೀಕ ವಿನೋದ್ ಮಾತನಾಡಿ ನಮ್ಮ ಈ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 10-12 ವರ್ಷಗಳಿಂದ ವಿದ್ಯುತ್ ಕೊರತೆಯನ್ನು ಮತ್ತು ವಿದ್ಯುತ್ ದಿಂದಆಗುವ ಅನಾಹುತಗಳಿಂದ ನಾವುಗಳು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದೇವೆ ಆದ್ದರಿಂದ ನಾವುಗಳು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದು ನಮ್ಮ ಮನವಿಯನ್ನು ಪರಿಗಣಿಸಿ ಒಂದು ತಿಂಗಳಲ್ಲಿ ಸಮರ್ಪಕವಾದ ವಿದ್ಯುತ್ ಒದಗಿಸುವುದಾಗಿ ಬರವಸೆ ನೀಡಿದ್ದಾರೆ ಆಗೇನಾದರೂ ಒಂದು ವೇಳೆ ಸಮರ್ಪಕವಾಗಿ ವಿದ್ಯುತ್ ಒದಗಿಸಿದಿದ್ದರೆ ಮುಂದಿನ ದಿನಗಳಲ್ಲಿ ಬೆಸ್ಕಾಂ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ. ಮುರುಳಿ ಎ. ವಿನೋದ್ ಲಿಝಿನ್ ಸೇರಿದಂತೆ ಕಾರ್ಮಿಕರು ವಿವಿಧ ಕಂಪನಿ ಮಾಲೀಕರು ವ್ಯವಸ್ಥಾಪಕರು ಸಿಬ್ಬಂದಿ ವರ್ಗದವರು ಮುಂತಾದವರು ಇದ್ದರು.

ವರದಿ :  ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!