Ad imageAd image

ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ

Bharath Vaibhav
ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ
WhatsApp Group Join Now
Telegram Group Join Now

ಬೆಳಗಾವಿ:-  ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಭಾಗ್ಯನಗರ 9 ನೇ ಕ್ರಾಸ್‌ ಸನಿಕಾ ಲ್ಯಾಡ್ ಮಾರ್ಕ್ ಹಿಂಭಾಗದ ಉದ್ಯನವನ, ಮೃತ್ಯುಂಜಯ ನಗರದ ಅನಿಗೋಳ ಆಶೀರ್ವಾದ ಮಂಗಲ ಕಾರ್ಯಾಲಯ ಹಿಂದುಗಡೆ, ಹರಿ ಮಂದಿರ ಮುಖ್ಯ ರಸ್ತೆಯಿದ ಪದ್ಮಶ್ರೀ ಹೊಟೇಲ್ ಭಾಗ್ಯನಗರ ಹಾಗೂ ಅಭ್ಯುದೋಯ ಗಾರ್ಡನ್ ಸರಾಫ್ ಕಾಲೋನಿ ಬಳಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರು ಚಾಯ್ ಪೇ ಚರ್ಚಾ ಮೂಲಕ ಸಾರ್ವಜನಿಕರನ್ನು ಭೇಟಿ ಮಾಡಿ, ಬೆಳಗಿನ ಶುಭೋದಯ ತಿಳಿಸಿ, ಮತಯಾಚನೆ ಮಾಡಿದರು.

ಈ ವೇಳೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪ ಮಹಾಪೌರರಾದ ಶ್ರೀ ಆನಂದ ಚೌವ್ಹಾಣ, ಪಾಲಿಕೆ ಸದಸ್ಯರಾದ ಶ್ರೀ ಅಭಿಜಿತ್ ಜವಾಲ್ಕರ್, ಶ್ರೀಮತಿ. ವಾಣಿ ಜೋಶಿ, ಶ್ರೀ ನಿತಿನ್ ಜಾಧವ್, ಶ್ರೀ ಮಂಗೇಶ್ ಪವಾರ್, ಶ್ರೀ ನಂದು ಮಿರಜಕರ್, ಪ್ರಮುಖರಾದ ಶ್ರೀ ವಿಲಾಸ ಜೋಶಿ, ಶ್ರೀ ಆನಂದ ಕುಲಕರ್ಣಿ, ಶ್ರೀ ಅಮರೇಂದ್ರ, ಶ್ರೀ ಶ್ರೀಶೈಲ ಮಸ್ತಮರಡಿ, ಶ್ರೀ ರಾಕೇಶ ಶೆಡಬಾಳ ಹಾಗೂ ಇತರರು ಉಪಸ್ಥಿತರಿದ್ದರು .

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!