ಸೇಡಂ:ತಾಲ್ಲೂಕಿನ ತೋಲಮಮಿಡಿ ಗ್ರಾಮದ 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಸುಮಾರು 8 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಅಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗಳು ಸರ್ಕಾರದಿಂದ ನಿಗದಿಪಡಿಸಿದ ಡ್ರೆಸ್ ಕೋಡ್ ಅನ್ನು ಪಾಲಿಸದೇ, ಸಾರ್ವಜನಿಕರು ವಿದ್ಯುತ್ ಸಮಸ್ಯೆಗಳ ಬಗ್ಗೆ ಕರೆ ಮಾಡಿದಾಗ ಅವರಿಗೆ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿಸುತ್ತಿರುವುದು ಗಮನಕ್ಕೆ ಬಂದಿದೆ.
ಇದಲ್ಲದೆ ಕೆಲ ಸಿಬ್ಬಂದಿಗಳು ಕರ್ತವ್ಯ ಸಮಯದಲ್ಲೇ ಉಪಕೇಂದ್ರದಲ್ಲಿ ಇರದೇ, ಹೊರಗಡೆ ತಿರುಗಾಡುವುದು, ಹೋಟೆಲ್‌ಗಳಲ್ಲಿ ಸಮಯ ಕಳೆಯುವುದು ಹಾಗೂ ರಾಜಕೀಯ ಪ್ರಭಾವ ತೋರಿಸುವಂತೆ ವರ್ತಿಸುತ್ತಿರುವುದು, ಸಮಸ್ಯೆ ಅಂತಾ ಕೇಳಿದರೆ ಮುಖ ನೋಡಿ ಕೆಲಸ ಮಾಡುತ್ತಿರುವರು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇಂತಹ ವರ್ತನೆಯಿಂದ ಸಾರ್ವಜನಿಕರಿಗೆ ಹೊಲಗಳಿಗೆ ವಿದ್ಯುತ್ ಸರಬರಾಜು ಮತ್ತು ಬೇರೆ ಯಾವುದೇ ರೀತಿಯ ಸಂಬಂಧಿಸಿದ ಸಮಸ್ಯೆಗಳು ಉಂಟಾದಾಗ ಕರೆ ಮಾಡಿದರೆ ಅಲ್ಲಿ ಇರುವೆ ಇಲ್ಲಿ ಇರುವೆ ಕೆಲಸದಲ್ಲಿ ನೆಪ ಹೇಳುತ್ತಾರೆ ಅಷ್ಟೇವಲ್ಲದೆ ರಾಜಕೀಯವಾಗಿ ಮಾತಾನಾಡುತ್ತಾರೆ ಆದ್ದರಿಂದ ಸೇವೆಯಲ್ಲಿ ವಿಳಂಬವಾಗುತ್ತಿದೆ.
ಈ ವಿಷಯವನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಗಂಭೀರವಾಗಿ ಗಮನಿಸಿ, ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ತಕ್ಷಣವೇ ಪರಿಶೀಲನೆ ನಡೆಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಅಧ್ಯಕ್ಷರಾದ ನರೇಶ್ ಏ ನಾಟಿಕರ ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹ ವ್ಯಕ್ತಪಡಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




