ಮಾನ್ವಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ
ಮೈಕ್ರೋ ಫೈನಾನ್ಸ್ ಬೇಡ ಎಂದು ಗುಡುಗಿದ ನೊಂದವರು
ಸರಕಾರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯ
ನಮಗೆ ನ್ಯಾಯಬೇಕು ಎಂದು ಸರಕಾರಕ್ಕೆ ಆಗ್ರಹ
ಮಾನ್ವಿ : ಮಾನ್ವಿ ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡುತ್ತಿರುವುದನ್ನು ತಡೆಯಬೇಕು, ಹಾಗು ಸರಕಾರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ನೊಂದ ನೂರಾರು ಮಹಿಳೆಯರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮೈಕ್ರೋ ಫೈನಾನ್ಸ್ ನವರು ನಮಗೆ ಸಾಲ ಕೊಟ್ಟಿದ್ದಾರೆ.ಆದರೆ ಇಂದೇ ಕಟ್ಟಬೇಕು ಎಂದು ಫೈನಾನ್ಸ್ ನವರು ಒತ್ತಾಯ ಮಾಡಿ ಮನೆಯ ಮುಂದೆ ನಿಂತು ಕಿರುಕುಳ ನೀಡುತ್ತಿರುವುದು ತಪ್ಪಬೇಕು ಎಂದು ಒತ್ತಾಯಿಸಿದರು.
ಅಮಾಯಕ ಮಹಿಳೆಯರಿಗೆ ಕಿರುಕುಳ ಕೊಡುತ್ತಿರುವುದರಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹೀಗಾಗಿ ಯಾರಾದರು ಅನಾಹುತ ಮಾಡಿಕೊಂಡರೆ ಇದಕ್ಕೆಲ್ಲ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳೆ ನೇರ ಹೊಣೆ ಎಂದು ಹೋರಾಟಗಾರರು ಕಿಡಿಕಾರಿದರು.
ವರದಿ : ಶಿವತೇಜ