————————-ಮಲ್ಕಪಲ್ಲಿ ಗ್ರಾಮದಲ್ಲಿ ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ
ಸೇಡಂ: ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ಕೃಷಿ ಇಲಾಖೆ ಸೇಡಂ ಹಾಗೂ ಕೊಡ್ಲಾ ಇವರ ಸಂಯೋಗದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ -VCC ಯೋಜನೆ ಅಡಿಯಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮದ ಜೊತೆಗೆ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಹಾಗೂ ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ವೆಂಕಟರೆಡ್ಡಿ, ಬಸಿರೆಡ್ಡಿ, ರಾಜಶೇಖರ ಗೌಡ ಹಾಜರಿದ್ದರು. ಇದೆ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ನವದರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕೃಷಿ ವಿಜ್ಞಾನಿಗಳಾದ ಡಾ. ವಾಸುದೇವ ನಾಯ್ಕ್, ಜ್ಞಾನದೇವ, ಚಂದ್ರಕಾಂತ್ ಹಾಗೂ ಕೊಡ್ಲಾದ ಕೃಷಿ ಅಧಿಕಾರಿ ಭೀಮರೆಡ್ಡಿ ರೈತರಿಗೆ ರಾಷ್ಟ್ರೀಯ ನೈಸರ್ಗಿಕ ಕೃಷಿ ಮತ್ತು ಖಾದ್ಯ ತೈಲ ಅಭಿಯಾನ ಅಭಿಯಾನ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಊರಿನ ರೈತರಾದ ನರಸರೆಡ್ಡಿ, ಭೀಮರೆಡ್ಡಿ ಕೊತಕಾಪ್, ಬಸ್ಸು ಯಾದವ್, ರಮೇಶ್ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗಳಾದ ಗುರು, ರಾಜು ಸೋನಾರ್ ತಾಂಡ, ಉಮೇಶ್ ಮುಂತಾದವರು ಹಾಜರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




