ಪಾವಗಡ : ತುಮಕೂರು ಜಿಲ್ಲೆ ಪಾವಗಡ: ತಾಲೂಕ್ ದಿನಾಂಕ 01/07/25 ಮಂಗಳವಾರ ರಂದು ರಾಜ್ಯ ಸರ್ಕಾರದ ಆದೇಶವಾಗಿದ್ದು ಪಾವಗಡ ಕೆಇಬಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ವತಿಯಿಂದ ಪಟ್ಟಣದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಗೃತಿ ಜಾತ ಹಮ್ಮಿಕೊಳ್ಳಲಾಗಿತ್ತು.

ಇಲಾಖೆಯ AWE ಮುಖ್ಯ ಅಧಿಕಾರಿ ಬಿ ಜಿ ಕೃಷ್ಣಮೂರ್ತಿ ಮಾತನಾಡಿ ವಿದ್ಯುತ್ ಅಪಘಾತದಿಂದ ಸಂಭವಿಸುವುದನ್ನು ಅದನ್ನು ತಡೆಗಟ್ಟಲು ನಾವು ಹೇಳುವುದೇನೆಂದರೆ ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳಿಗೆ ತಂತಿಯನ್ನು ಕಟ್ಟಿ ಬಟ್ಟೆ ಒಣಗಿಸುವುದು ಮತ್ತು ಜಾನುವಾರುಗಳನ್ನು ಕಟ್ಟುವುದು ಇದರಿಂದಾಗಿ ಹೆಚ್ಚಿನ ವೋಲ್ಟೇಜ್ ಬರುವುದು ಅಪಘಾತಗಳ ಆಗುವುದು ಸಾರ್ವಜನಿಕವಾಗಿ ನಾವು ಕೇಳುವುದೇನೆಂದರೆ ಇಂತಹ ತಪ್ಪುಗಳನ್ನು ಮಾಡಬಾರದೆಂದು ವಿದ್ಯುತ್ತು ಕಂಬಗಳಿಗಾಗಲಿ ಅಥವಾ ಟ್ರಾನ್ಸ್ಪಾರಂ (ಸೆಂಟರ್) ಜಾನುವಾರುಗಳನ್ನು ಕಟ್ಟುವುದಾಗಲಿ ಬಟ್ಟೆಗಳನ್ನು ಒಣಗಿಸುವುದಾಗಲಿ ಈ ತರಹ ಕೆಲಸಗಳನ್ನು ಮಾಡಬೇಡಿ ಎಂದು ಹೇಳಿ.
ಮಳೆಗಾಲದಲ್ಲಿ ಗಾಳಿ ಮಳೆಗೆ ಕೆಳಗೆ ಬಿದ್ದ ವಿದ್ಯುತ್ ಕಂಬ ತುಂಡರಿಸಿ ಬಿದ್ದ ಎಲೆಕ್ಟ್ರಿಕ್ ವಯರ್ ಮುಟ್ಟುವುದು ಅಂತಹ ಸ್ಥಳಗಳಿಗೆ ತೆರಳಿ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ.ಅಲ್ಲದೆ ಹಸಿ ಕೈ (ಒದ್ದೆ ಕೈ) ಮೂಲಕ ಕರೆಂಟ್ ಸ್ವಿಚ್ ಬೋರ್ಡ್ ಮುಟ್ಟುವುದು ಆನ್ ಅಂಡ್ ಆಫ್ ಮಾಡುವುದು ಹೀಗೆ ಅನೇಕ ವಿಧದಲ್ಲಿ ವಿದ್ಯುತ್ ನಿಂದ ನಮಗೆ ಅಪಾಯ ಇರುತ್ತದೆ ಇಂತಹ ಸಮಯದಲ್ಲಿ ಅದರಲ್ಲಿಯೂ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು. ಎಂದು ತಿಳಿಸಿ.
ನಂತರ ಕೆಲವರು ತೊಟ್ಟಿಗಳಿಗೆ ಮೋಟರ್ ಅಳವಡಿಸಿಕೊಂಡು ಮೈನ್ ಸ್ವಿಚ್ ಆಫ್ ಮಾಡದೆ ಪ್ಲಗ್ ತೆಗಿಯಲು ಹೋದಾಗ ಆಕ್ಸಿಡೆಂಟ್ ಗಳು ಹಾಗುತ್ತವೆ ಹೊಲಗಳಲ್ಲಿ ಊರುಗಳಲ್ಲಿ ತಂತಿ ಬಿದ್ದಾಗ ಮುಟ್ಟಬಾರದು ಮಾಹಿತಿ ತಿಳಿದ ತಕ್ಷಣವೇ ನಮ್ಮ ಸಹಕಾರ ಸಹಾಯವಾಣಿ 1912 ಗೆ ಕರೆ ಮಾಡಿ ನಮ್ಮ ಇಲಾಖೆ ಲಾಸ್ ಆಗುತ್ತಿದೆ ಎಲ್ಲರೂ ಮೀಟರ್ ಅಳವಡಿಸಿಕೊಳ್ಳಬೇಕಾಗಿ ವಿನಂತಿ ಮಾಡಿಕೊಂಡು ಎಂದು ತಿಳಿಸುತ್ತಾರೆ,
ಈ ವೇಳೆ ಸಪ್ತಾಹ ಜಾಗೃತಿ ಜಾತದಲ್ಲಿ ಭಾಗವಹಿಸಿದವರು ಆಂಜನೇಯ ಬಾಬು. ಕಿರಿಯ ಇಂಜಿನಿಯರ್ಗಳಾದ ರಾಜಶೇಖರ್ ಎಸ್. ಸಂಜೀವ ರಾಯಪ್ಪ. ರಮೇಶ್ ಬಾಬು. ವಂಶಿ ಕೃಷ್ಣಾರೆಡ್ಡಿ. ಇನ್ನೂ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ನೌಕರರು ಉಪಸ್ಥಿತರಿದ್ದರು.
ವರದಿ : ಶಿವಾನಂದ




