ಜೋಯಿಡಾ:ಜೋಯಿಡಾ ತಾಲೂಕಿನ ಕೃಷಿ ಇಲಾಕೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ಕೃಷಿ ಇಲಾಕೆ ಜೋಯಿಡಾ ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಸಾವಯುವ ಕೃಷಿ ಕುರಿತು ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷೆ ಚಂದ್ರಿಮಾ ಮಿರಾಶಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜೋಯಿಡಾ ತಹಶಿಲ್ದಾರ ಮಂಜುನಾಥ ಮೊನ್ನೋಳಿ ಮಾತನಾಡಿ ರೈತರು ದೇಶದ ಬೆನ್ನೆಲುಬು ,ಜೋಯಿಡಾ ತಾಲೂಕಿನಲ್ಲಿ ಹೆಚ್ಚಿನ ರೈತರು ಸಾವಯುವ ಕೃಷಿಯನ್ನು ಮಾಡುತ್ತಿದ್ದಾರೆ, ಹೆಚ್ಚಿನ ರೈತರು ಆರ್.ಟಿ.ಸಿ ಸರಿಯಾಗಿಲ್ಲ ದಯಮಾಡಿ ರೈತರು ತಮ್ಮ ತಮ್ಮ ಆರ್.ಟಿ.ಸಿ ಸರಿಪಡಿಸಿಕೊಳ್ಳಿ ಎಂದರು.
ತಾ.ಪಂ ಇಓ ಭಾರತಿ ಎಂ ಮಾತನಾಡಿ ಜೋಯಿಡಾ ತಾಲೂಕನ್ನು ಸಾವಯುವ ತಾಲೂಕನ್ನಾಗಿ ಘೋಷಿಸಲಾಗಿದೆ ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪ್ರತಿಭಾ ಹೂಗಾರ ಉಪ ನಿರ್ದೇಶಕರು ಕೃಷಿ ಇಲಾಕೆ ಕಾರವಾರ ಇವರು ಮಾತನಾಡಿ ಸಾವಯುವ ಕೃಷಿಯಿಂದ ರೈತನ ಜಮೀನು ಉತ್ತಮವಾಗಿರುತ್ತದೆ, ಕೆಮಿಕಲ್ ಬಳಸುವುದರಿಂದ ಭೂಮಿ ಹಾಳಾಗುತ್ತದೆ ಎಂದರು.
ಕೆನರಾ ಬ್ಯಾಂಕ ನ ಪ್ರತಿನಿಧಿ ಪ್ರಶಾಂತ ಕೆ ಮಾತನಾಡಿ ರೈತರಿಗೆ ಬ್ಯಾಂಕನಿಂದ ಇರುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಉತ್ತಮವಾಗಿ ಕೃಷಿ ಮಾಡುತ್ತಿರುವ ಗಜಾನನ ಭಾಗ್ವತ್ ನೇತುರ್ಗಾ, ಇಂದುಮತಿ ದೇಸಾಯಿ ಯರಮುಖ, ರಾಮಚಂದ್ರ ಹೆಗಡೆ ನಂದಿಗದ್ದೆ , ಸುರೇಖಾ ಶಿರೋಡಕರ ಅವರನ್ನು ಕೃಷಿ ಇಲಾಕೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ವೇದಿಕೆಯಲ್ಲಿ ಜೋಯಿಡಾದ ಕೃಷಿ ಅಧಿಕಾರಿ ಸುಂದರ ಟಿ.ಎಚ್, ತೋಟಗಾರಿಕೆ ಇಲಾಕೆ ಅಧಿಕಾರಿ ರಮೇಶ್, ಪಿ.ಡಿ.ಓ ನಜೀರಸಾಬ್ ಅಕ್ಕಿ, ಪಶು ವೈದ್ಯಾಧಿಕಾರಿ ಡಾ ಮಂಜಪ್ಪ, ಸಂಪನ್ಮೂಲ ವ್ಯಕ್ತಿ ಮಲ್ಲೇಶಪ್ಪ ಬಿಸಿರೊಟ್ಟಿ, ಕೃಷಿ ಇಲಾಕೆಯ ನಿತಿನ್ ಚಹ್ಹಾಣ,ಇಬ್ರಾಹಿಂ ಕೆ, ತಿಮ್ಮೇಶ ಎಮ್, ಸುದರ್ಶನ ಎಸ್ ,ಮದನ್ ಇತರರು ಇದ್ದರು.




