ಸಿಂಧನೂರು : ನಗರ ಸಂಚಾರ ಪೊಲೀಸ್ ಠಾಣೆ ಹಾಗೂ ಪಾಟೀಲ್ ಶಿಕ್ಷಣ ಸಂಸ್ಥೆ ಕಾಲೇಜ್ ವತಿಯಿಂದ ಗುರುವಾರ “ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಚರಣಿ ಜನವರಿ- 2025 ಸಂಚಾರ ನಿಯಮಗಳ ಪಾಲನೆ, ಸುರಕ್ಷತೆಯ ಚಾಲನೆ ಹಾಗೂ ನಿಮ್ಮ ಕುಟುಂಬಗಳನ್ನು ಸಂತೋಷವಾಗಿಡಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ, ಆಟೋಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಬೇಡಿ ಎಲ್ಲರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಪ್ರಾಣ ರಕ್ಷಣೆ ಮಾಡಿಕೊಳ್ಳಿ ಎಂಬ ಅಭಿಯಾನವನ್ನು ಕಾಲೇಜ್ ವಿದ್ಯಾರ್ಥಿ ನಿಯರಿಂದ ಸಂಚಾರ ನಿಯಮಗಳ ಪಾಲನೆ ಮಹತ್ವದ ಬಗ್ಗೆ ಅವುಗಳ ಉಲ್ಲಂಘನೆ ಯಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಜಿಲ್ಲಾ ಪೊಲೀಸ್ ಹಾಗೂ ತಾಲೂಕ ಪೊಲೀಸ್ ವತಿಯಿಂದ ನಗರದ ಗಾಂಧಿ ವೃತದಿಂದ ಬಸವೇಶ್ವರ ಸರ್ಕಲ್ ವರೆಗೆ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದ ರಸ್ತೆ ನಿಯಮಗಳನ್ನು ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಸಾರ್ವಜನಿಕರಿಗೆ ಪೊಲೀಸರು ವಿತರಿಸಿದರು
ಈ ಸಂದರ್ಭದಲ್ಲಿ- ಪೊಲೀಸ್ ಇಲಾಖೆಯ ನಗರ ಪೊಲೀಸ್ ಠಾಣೆ ಪಿಎಸ್ಐ, ಸಂಚಾರ ಪೊಲೀಸ್ ಠಾಣಾ ಪಿಎಸ್ಐ, ಹಾಗೂ ಕಾಲೇಜ್ ನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು,

ಬಸವರಾಜ ಬುಕ್ಕನಹಟ್ಟಿ




