ಸೇಡಂ: ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಬಟಗೇರಾ. ಬಿ. ಶಾಲೆಯಲ್ಲಿ ರಾಷ್ಟೀಯ ಬಾಹ್ಯಾಕಾಶ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ನಮೋ ಬುದ್ಧ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೆಲ್ ಫೇರ್ ಟ್ರಸ್ಟ್ ಮಳಖೇಡ ವತಿಯಿಂದ ಹಮ್ಮಿಕೊಳ್ಳಲಾಯಿತು. ಸಸಿಗೆ ನೀರೆರೆದು ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಆದರ್ಶ ವಿದ್ಯಾಲಯ ಬಿಬ್ಬಳ್ಳಿ ಶಾಲೆಯ ಗಣಿತ ಶಿಕ್ಷಕರಾದ ವೆಂಕಟೇಶ್ ರವರು ಬಾಹ್ಯಕಾಶ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡುತಾ ಇಸ್ರೋ ಸ್ಥಾಪನೆ , ಆರ್ಯಭಟ ಉಪಗ್ರಹ , ಚಂದ್ರಯಾನ-3, ಗಗನಯಾನ ವಿಷನ್ -2025 ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಕುರಿತು ಹಾಗೂ ವೈದ್ಯಕೀಯ ಆವಿಷ್ಕಾರ ಮತ್ತು ದೈನಂದಿನ ಜೀವನಕ್ಕೆ ಉಪಯೋಗವಾಗಿದೆ. ಜೊತೆಗೆ ಉಪಗ್ರಹಗಳಿಂದ ದೂರ ಸಂಪರ್ಕ , ಹವಾಮಾನ ಮುನ್ಸೂಚನೆ ಮತ್ತು ಭೂಮಿಯ ಸಂವಹನಕ್ಕಾಗಿ ನಿರ್ಣಯಕವಾಗಿವೆ, ಅದಕ್ಕಾಗಿ ವಿದ್ಯಾರ್ಥಿಗಳು ಕೂಡ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು. ವಿಜ್ಞಾನಿಗಳ ಕುರಿತು ಅಧ್ಯಯನಶೀಲಾರಾಗಬೇಕು ,ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಾಹ್ಯಾಕಾಶದ ಅನ್ವೇಷಣೆ ಸತ್ವವನ್ನು ಮಕ್ಕಳಿಗೆ ಸುಂದರವಾಗಿ ವಿವರಿಸಿ, ಮಕ್ಕಳು ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಮುಖಾಂತರ ಹೆಚ್ಚು ತಿಳಿದುಕೊಳ್ಳಲು ಸಾಧ್ಯವೆಂದು, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ ಮಾತನಾಡಿದರು.
ರಾಜು ಕಟ್ಟಿ ಅವರು ಪ್ರಾಸ್ತಾವಿಕ ನುಡಿಯಲ್ಲಿ ನಮ್ಮ ಸಂಸ್ಥೆಯು ಶಿಕ್ಷಣದ ಪ್ರಗತಿಗೆ ಬೆಂಬಲಿಸುವುದೆಂದು ಮಾತನಾಡಿದರು. ರಜನಿ ವಿಜ್ಞಾನ ಶಿಕ್ಷಕರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲೆಯ ಮುಖ್ಯ ಗುರುಗಳಾದ ರಾಜೇಶ್ರೀ. ಕೆ. ಅವರು ಅಧ್ಯಕ್ಷೀಯ ಭಾಷಣದಲ್ಲಿ ಪ್ರತಿ ವಿದ್ಯಾರ್ಥಿಯು ವೈಜ್ಞಾನಿಕವಾಗಿ ಬೆಳೆಯಬೇಕೆಂದು ನುಡಿದರು, ಕೃತ್ತಿಕಾ ಬಾಹ್ಯಾಕಾಶ ದಿನಾಚರಣೆ ಕುರಿತು ಮಾತನಾಡಿದಳು, ಶಾಲೆಯ ವಿದ್ಯಾರ್ಥಿಗಳು ಮತ್ತು ಎಲ್ಲಾ ಶಿಕ್ಷಕರು ಉಪನ್ಯಾಸವನ್ನು ತುಂಬಾ ಆಸಕ್ತಿಯಿಂದ ಆಲಿಸಿದರು. ಶ್ವೇತಾ , ಕೃತ್ತಿಕಾ , ಅಂಬಿಕಾ ಪ್ರಾರ್ಥನೆ ಗೀತೆ ಹಾಡಿದರು, ಪದ್ಮಾವತಿ ಅವರು ಸ್ವಾಗತಿಸಿದರು.
ಅಶೋಕ, ಉಮರಾಣಿ ಅವರು ವಂದನಾರ್ಪಣೆ ಮಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




