————–ಸರ್ದಾರ ವಲ್ಲಭಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ಕಾರ್ಯಕ್ರಮ
ಚಿಂಚೋಳಿ: ಕರ್ನಾಟಕ ಜಿಲ್ಲಾ ಪೊಲೀಸ್ ಚಿಂಚೋಳಿ ಉಪ ವಿಭಾಗ ಚಿಂಚೋಳಿ ವೃತ್ತ ಚಿಂಚೋಳಿ ಪೊಲೀಸ್ ಠಾಣೆ ವತಿಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಆಚರಣೆಯನ್ನು ಶ್ರೀ ಹರಕೂಡ ಶಾಲೆ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಏಕತಾ ದಿನಾಚರಣೆ ಮಾಡಲಾಯಿತು.
ಚಂದಾಪುರ ವೃತ್ತದಿಂದ ಹರಕೂಡ ಶಾಲೆ ವರಿಗೆ ಪೋಲಿಸ್ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಶಿಕ್ಷಕರು ಪದ ಸಂಚಲನ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಮೂಲಕ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಈ ಒಂದು ಕಾರ್ಯಕ್ರಮದ ಕುರಿತು ಚಿಂಚೋಳಿ ಪೊಲೀಸ್ ಠಾಣೆಯ DYSP.ಸಂಗಮನಾಥ ಹೀರೆಮಠ ಮಾತನಾಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರಮುಖ ಸಾಧನೆಗಳಲ್ಲಿ 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಏಕೀಕರಿಸುವುದು, ‘ಉಕ್ಕಿನ ಮನುಷ್ಯ’ ಎಂಬ ಬಿರುದನ್ನು ಗಳಿಸುವುದು, ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿ ಸೇವೆ ಸಲ್ಲಿಸುವುದು ಮತ್ತು ಅಖಿಲ ಭಾರತ ಸೇವಾ ವ್ಯವಸ್ಥೆಯನ್ನು ಸ್ಥಾಪಿಸುವುದು ಸೇರಿವೆ.
ಅವರು ಬಾರ್ಡೋಲಿ ಸತ್ಯಾಗ್ರಹದಲ್ಲಿ ತಮ್ಮ ನಾಯಕತ್ವಕ್ಕಾಗಿ ಸರ್ದಾರ್ ಎಂಬ ಬಿರುದನ್ನು ಪಡೆದರು ಮತ್ತು ಅಮುಲ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸಂದರ್ಭದಲ್ಲಿ ಚಿಂಚೋಳಿ ಪೊಲೀಸ್.CPI.ಕಪೀಲದೇವ ಪೋಲಿಸ್ ಸಿಬ್ಬಂದಿಗಳಾದ.ರಾಜು. ಯಮನೂರಪ್ಪ.ಮಾಹತೇಶ.ಮಾಳಪ್ಪ. ಹಾಗೂ ಗ್ರಹ ರಕ್ಷಕ ದಳದವರು ಶಾಲೆ ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು.
ವರದಿ: ಸುನಿಲ್ ಸಲಗರ




