ಯಳಂದೂರು: ತಾಲ್ಲೂಕುಆಡಳಿತದಿಂದ ರಾಷ್ಟ್ರೀಯ ಮತದಾರರ ದಿನವನ್ನು ತಾಲೋಕು ಪಂಚಾಯಿತಿ ಸಭಾಂಗಣದಲ್ಲಿ ಆಚರಣೆಯನ್ನು ಮಾಡಲಾಯಿತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಧೀಶರುರಾದ ಆಕರ್ಶ್ ರವರ ಜೋತಿಬೆಳಗಿಸು ಮೂಲಕ ಚಾಲನೆಯನ್ನು ನೀಡಿ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿದರು.

ಯಳಂದೂರು ಸಿವಿಲ್ ನ್ಯಾಯಧೀಶರಾದ ಆಕರ್ಶ್ ರವರು ಮಾತನಾಡಿ ಯುವಶಕ್ತಿ ಆಗಿರುವ ಯುವ ಮತದಾರರನ್ನು ಮತದಾನ ಮಾಡಲು ಮತದಾನದ ಬಗ್ಗೆ ಜಾಗೃತಿ ಮೂಡಿಸಲು 2011ನೇ ಇಸವಿಯ ಜನವರಿ 25ನೇ ತಾರೀಕು ಈ ಮತದಾರ ದಿನವನ್ನು ಆಚರಣೆ ಮಾಡಲಾಯಿತು ಮತದಾನವನ್ನು ನಾವು ಮಾರಿಕೊಳ್ಳಬಾರದು ಮತದಾನ ನಮ್ಮೆಲರಾ ಹಕ್ಕು ಮತದಾನ ಶ್ರೇಷ್ಠ ದಾನ ವೆಂದು ತಿಳಿಸಿದರು.
ಮುಖ್ಯ ಭಾಷಣಕರಾದ ಉಪ ಪ್ರಾಂಶುಪಾಲರು ನಂಜುಂಡ್ಯ ರವರು ಮಾತನಾಡಿ 2011ರಲ್ಲಿ ಯುವಜನೆತೆಯನ್ನು ಮತದಾನದ ಕಡೆ ಸೆಳೆಯಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಣೆ ಮಾಡುತ ಇಲ್ಲಿಯವರೆಗೆ ಬಂದಿದ್ದೇವೆ ಇಂದು ನಾವು 15ನೇ ರಾಷ್ಟ್ರೀಯ ಮತದಾರರ ದಿನಾ ಆಚರಣೆಯನ್ನು ಮಾಡುತ್ತಿದ್ದೇವೆ ಮತದಾನ ನಮ್ಮ ಹಕ್ಕು 18ವರ್ಷದ ಮೇಲ್ಪಟ್ಟ ಎಲ್ಲರು ಮತದಾನವನ್ನು ತಪ್ಪದೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಸೀಲ್ದಾರ್ ಜಯಪ್ರಕಾಶ್, ಕೃಷಿ ಇಲಾಖೆಯ ಅಧಿಕಾರಿಯಾದ ಅಮೃತೇಶ್ ಅವರು,ಉಮೇಶ್, ಗುರುಮಹೇಂದ್ರ, ಶಿಕ್ಷಕರಾದ ರೇಚಣ್ಣ,ಸರಸ್ವತಿ, ಶಿವರಂಜಿನಿ, ಅಧಿಕಾರಿ ವರ್ಗದವರು, ಮಕ್ಕಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ




