Ad imageAd image

ಬೆಳವಡಿಯಲ್ಲಿ ನೈಸರ್ಗಿಕ ಕೃಷಿ ತರಬೇತಿ

Bharath Vaibhav
ಬೆಳವಡಿಯಲ್ಲಿ ನೈಸರ್ಗಿಕ ಕೃಷಿ ತರಬೇತಿ
WhatsApp Group Join Now
Telegram Group Join Now

ಮಲ್ಲಮ್ಮನ ಬೆಳವಡಿ: ನೈಸರ್ಗಿಕ ಕೃಷಿ ತರಬೇತಿ ನೈಸರ್ಗಿಕ ಕೃಷಿ ಕುರಿತು ಅರಿವು ಮೂಡಿಸುವ ಹಾಗೂ ತರಬೇತಿ ಕಾರ್ಯಕ್ರಮವನ್ನು ಬೆಳವಡಿ ಗ್ರಾಮದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಕಾರಿಮನಿ ಅವರು ವಹಿಸಿಕೊಂಡಿದ್ದರು. ಉದ್ಘಾಟಕರಾಗಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಬಸವರಾಜ ದಳವಾಯಿ ಅವರು ಆಗಮಿಸಿದ್ದರು.

ಪ್ರಸ್ತಾವಿಕವಾಗಿ ಆತ್ಮ ತಾಲೂಕಾ ತಾಂತ್ರಿಕ ವ್ಯವಸ್ಥಾಪಕರಾದ ಶ್ರೀ ಚಂದ್ರಕಾಂತ್ ಮರಡಿ ಅವರು ಕಾರ್ಯಕ್ರಮದ ಕುರಿತಾಗಿ NMNF ಯೋಜನೆಯ ಹಾಗೂ ನೈಸರ್ಗಿಕ ಕೃಷಿ ಕುರಿತು ಬೆಳಕು ಚೆಲ್ಲಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೆಎಲ್ಇ ಕೆವಿಕೆ ಮತ್ತಿಕೊಪ್ಪದ ನೈಸರ್ಗಿಕ ಕೃಷಿ ನೋಡಲ್ ವಿಜ್ಞಾನಿಗಳಾದ ಶ್ರೀ ಎಸ್ ಎಂ ವಾರದ ಸರ್ ಅವರು ನೈಸರ್ಗಿಕ ಕೃಷಿ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಪೂಚರ್ ಬೈಯೊಟೆಕ್ ಹಾಗೂ ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿ ತಜ್ಞರಾದ ಡಾ ಮಂಜುನಾಥ್ ಅವರು ಕೃಷಿಯಲ್ಲಿ ಸೂಕ್ಷ್ಮ ಜೀವಿಗಳು ಹಾಗೂ ಜೈವಿಕ ಗೊಬ್ಬರಗಳ ಕುರಿತು ಮಾಹಿತಿ ನೀಡಿದರು. ಕೆವಿಕೆ ಮತ್ತಿಕೊಪ್ಪದ ಸಸ್ಯ ಸಂರಕ್ಷಣಾ ತಜ್ಞರಾದ ಶ್ರೀ ಎಸ್ ಎಸ್ ಹಿರೇಮಠ ಅವರು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಎಣ್ಣೆ ಕಾಳು ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ನಂತರ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಬಸವರಾಜ್ ದಳವಾಯಿ ಅವರು ಮಾತನಾಡಿ ಇಲಾಖೆ ಯೋಜನೆಗಳ ಕುರಿತು ಹಾಗೂ ಸಮಗ್ರ ಕೃಷಿ ಕುರಿತು ಮಾಹಿತಿ ನೀಡಿದರು.ಸಾವಯುವ ಹಾಗೂ ನೈಸರ್ಗಿಕ ಕೃಷಿಕರು ಶ್ರೀ ಮಂಜುನಾಥ ತಹಶೀಲ್ದಾರ್ ಅವರು ತಮ್ಮ ಕೃಷಿ ಅನುಭವ ತಾವು ಮಾಡಿರುವ ಅನುಸರಿಸಿರುವ ಸಾವಯುವ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.ನಂತರ ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರ್ ಕಾರಿಮನಿ ಅವರು ಮಾತನಾಡಿ ಕೃಷಿ ವಿಜ್ಞಾನಿಗಳು ಹೇಳುವ ಸೂಚನೆಗಳನ್ನು ಎಲ್ಲ ರೈತರು ತಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಪಂಚಾಯತ್ ಸದಸ್ಯರು ಹಾಗೂ ವೇದಮೂರ್ತಿ ಬಸಯ್ಯ ವಿರಕ್ತಮಠ ಸ್ವಾಮಿಗಳು ರೈತರಿಗೆ ಕಾರ್ಯಕ್ರಮಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಮ್ಮ ಹಿತವಚನಗಳನ್ನು ತಿಳಿಸಿದರು,ಹಾಗೂ ಬೆಳವಡಿ ಗ್ರಾಮದ ರೈತ ಬಾಂಧವರು ಸಹಾಯಕ ಕೃಷಿ ನಿರ್ದೇಶಕರಿಗೆ ಹಾಗೂ ಸಾವಯವ ಕೃಷಿಕ ಮಂಜುನಾಥ್ ತಹಶೀಲ್ದಾರ್ ಅವರನ್ನು ಸನ್ಮಾನಿಸಿದರು.ಕಾರ್ಯಕ್ರಮವನ್ನು ಪ್ರಗತಿಪರ ರೈತರಾದ ಬಾಬು ಖಂಡೋಜಿ ಅವರು ನಿರೂಪಿಸಿದರು.ಕೃಷಿ ಅಧಿಕಾರಿಗಳಾದ ಯಮನಪ್ಪ ಸರ್ ವಂದನಾರ್ಪಣೆ ಕೈಗೊಂಡರು , ಕಾರ್ಯಕ್ರಮದಲ್ಲಿ ಎಸ್ಎಫ್ ಪೂಜಾರ್ ಸರ್ ಮಾಜಿ ಝೆಡ್ಪಿ ಈರಣ್ಣ ಕರಿಕಟ್ಟಿ ಅವರು ಪಂಚಾಯಿತಿ ಹಾಗೂ ಪಿ ಕೆ ಪಿ ಎಸ್ ನ ಸದಸ್ಯರು ಕೃಷಿ ಸಖಿ,ಪತ್ರಿಕೋದ್ಯಮದವರು ,ಸಾವಯುವ ಉತ್ಪಾದಿಸುವ ಕಂಪನಿಗಳಾದ ಸರ್ವಶ್ರೀ ಪ್ರೈವೇಟ್ ಲಿಮಿಟೆಡ್ ಹಾಗೂ ಡಾ.ಭೂಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಭಾಗವಹಿಸಿದ್ದರು.

ವರದಿ: ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!