ಪ್ರತಿದಿನ ವ್ಯಾಯಾಮ, ಯೋಗಕ್ಕೆ ಒತ್ತು ನೀಡಿ
ಬೀದರ : ಪ್ರಕೃತಿಗೆ ವಿರುದ್ಧವಾಗಿ ದೇಹವನ್ನು ದಂಡಿಸಿದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಸಾತ್ವಿಕ ಆಹಾರವನ್ನ ಸ್ವೀಕರಿಸಬೇಕು, ಜಿಮ್‌ಗೆ ತೆರಳಿ ಶೀಘ್ರ ಪರಿಣಾಮ ಪಡೆಯುವುದಕ್ಕಿಂತ ಯೋಗ, ವ್ಯಾಯಾಮ, ಉಪವಾಸ ಮಾಡಿ ದೇಹವನ್ನು ಸದೃಢವಾಗಿಟ್ಟು
ಕೊಳ್ಳುವುದು ಉತ್ತಮ ಎಂದು ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿಜಿ ಸಲಹೆ ನೀಡಿದರು.
ನಗರದ ಚಿದಂಬರಾಶ್ರಮದಲ್ಲಿ ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಸೇಶನ್ ಬೀದರ ಘಟಕದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿನಿತ್ಯ ಅರ್ಧತಾಸು ಯೋಗ, ಧ್ಯಾನ, ಪ್ರಾಣಾಯಾಮ, ಎಳೆ ಬಿಸಿಲಿನಲ್ಲಿ ನಡಿಗೆ, ಹದಿನೈದು ದಿನಕ್ಕೊಮ್ಮೆ ಉಪವಾಸ ಜೊತೆಗೆ ಅಭ್ಯಂಗಸ್ನಾನ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಪಂಚಭೂತಗಳಾದ ಭೂಮಿ, ವಾಯು, ಆಕಾಶ, ಅಗ್ನಿ ಮತ್ತು ಜಲ ಇವು ಮನುಷ್ಯನಿಗೆ ಬಹಳ ಮುಖ್ಯವಾದವು ಈ ತತ್ವಗಳಲ್ಲಿ ಎಲ್ಲ ಗುಣ ಅಡಗಿದೆ ಇದರ ಕುರಿತು ಜಿಲ್ಲೆಯಲ್ಲಿ ಐ.ಎನ್.ಓ ಪ್ರಚಾರ ಪ್ರಸಾರದ ಕೆಲಸ ಮಾಡಲಿ ಎಂದರು.
ಐ.ಎನ್.ಓ ರಾಷ್ಟ್ರೀಯ ಅದ್ಯಕ್ಷ ಅನಂತ ಬಿರಾದಾರ ಮಾತನಾಡಿ ಪ್ರಾಕೃತಿಕ ಚಿಕಿತ್ಸಾ ಪದ್ದತಿಯಿಂದ ಯಾವುದೆ ಅಡ್ಡಪರಿಣಾಮವಿಲ್ಲ ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ಅರಿವಿಲ್ಲ ಅರಿವು ಮೂಡಿಸಲು ನಮ್ಮ ಐ.ಎನ್.ಓ ಸಂಘಟನೆಯಿಂದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ದೇಶದ ಸೂಮಾರು ಐನೂರು ಜಿಲ್ಲೆಗಳಲ್ಲಿ ಮತ್ತು ಹದಿನೈದು ದೇಶಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದರು.
ಪ್ರಾಕೃತಿಕ ಚಿಕಿತ್ಸಾ ಶಿಬಿರ, ಶಾಲಾ-ಕಾಲೇಜುಗಳು ಮತ್ತು ಹಳ್ಳಿಗಳಲ್ಲಿ ಪ್ರಾಕೃತಿಕಿ ಚಿಕಿತ್ಸೆ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಮತ್ತು ಪ್ರತಿವರ್ಷ ಜೂನ್ 21 ರಂದು ದೇಶಾದ್ಯಂತ ಯೋಗ ಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಈ ವರ್ಷ ಬೀದರ ಜಿಲ್ಲೆಯಲ್ಲಿಯು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಜಿ ಶೆಟಕಾರ, ಡಾ.ಪೂರ್ಣಿಮಾ ಜಿ, ಡಾ.ರೂಪೇಶ ಎಕಲಾರಕರ್, ಡಾ.ಹಾವಗಿರಾವ ಮೈಲಾರೆ, ಗುರುನಾಥ ರಾಜಗೀರಾ, ಯೋಗೆಂದ್ರ ಎದಲಾಪುರೆ, ಗುರುನಾಥ ಜ್ಯಾಂತಿಕರ್, ರಾಜಕುಮಾರ ಮಾಳಗೆ, ಕಾಮಶೆಟ್ಟಿ ಚಿಕಬಸ್ಸೆ, ರಾಜಶೇಖರ ನಾಗಮೂರ್ತಿ ಸೇರಿದಂತೆ ಇತರರಿದ್ದರು.
ಐ.ಎನ್.ಓ ನೂತನ ಜಿಲ್ಲಾ ಪದಾಧಿಕಾರಿಗಳ ಘೋಷಣೆ
ಪ್ರಾಕೃತಿಕ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಪೂಜ್ಯರ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮತ್ತು ಸಾಮಾಜಿಕ ಬದ್ದತೆಯುಳ್ಳವರ ಒಳಗೊಂಡು ಜಿಲ್ಲೆಯ ತಂಡ ರಚಿಸಲಾಗಿದ್ದು ಎಲ್ಲರು ಸಕ್ರಿಯವಾಗಿ ಯೋಗ, ಆಯುರ್ವೇದ ಮತ್ತು ಪ್ರಾಕೃತಿಕ ಚಿಕಿತ್ಸೆ ಪದ್ದತಿ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿ ಹೊಸ ತಂಡವನ್ನ ಅನಂತ ಬಿರಾದಾರ ಅವರು ಘೋಷಿಸಿದರು.
ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿ, ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೆವರು (ರಾಜ್ಯದ ಮಹಾ ಪೋಷಕರು) ಬಿ.ಜಿ.ಶೆಟಕಾರ, ಡಾ.ಪೂರ್ಣಿಮಾ ಜಿ, ಡಾ.ರೂಪೇಶ ಎಕಲಾರಕರ್ (ಪೋಷಕರು) ಗುರುನಾಥ ಜ್ಯಾಂತಿಕರ್, ರಾಜಶೇಖರ ನಾಗಮೂರ್ತಿ, ರಾಜಕುಮಾರ ಮಾಳಗೆ, ಅನಿಲ ಬಿರಾದಾರ, ಜಗದೀಶ ಮುಖೇಡಕರ್, ಅಜಯಕುಮಾರ ದುಬೆ, ಗೋಪಾಲ ತಾಂದಳೆ, ಕಾಮಶೇಟ್ಟಿ ಚಿಕಬಸ್ಸೆ, ಶಿವಶರಣಪ್ಪಾ ಲಿಂಗಪ್ಪಾ, ಡಾ.ಲಿಂಗಪ್ಪಾ ಮಡಿವಾಳ, ಜಗದೀಶ ಮುಖೇಡಕರ್, ಡಾ.ದೇವಕಿ ನಾಗೂರೆ, ( ಸಲಹೆಗಾರರು) ಗೋರಖನಾಥ ಕುಂಬಾರ (ಜಿಲ್ಲಾದ್ಯಕ್ಷರು), ಸಂತೋಷ ಪಾಟೀಲ (ಜಿಲ್ಲಾ ಪ್ರಧಾನ ಕಾರ್ಯದರ್ಶಿ) ಡಾ.ಮಂಜುಳಾ ಮುಚಳಂಬೆ( ಜಿಲ್ಲಾ ಸಂಚಾಲಕರು) ಹರಿದೇವ ರುದ್ರಮುನಿ, ರಾಜಕುಮಾರ ನಾಯಕ, ಡಾ.ನಂದಕುಮಾರ ತಾಂದಳೆ, ರೂಪಾ ಪಾಟೀಲ, ಅವಿನಾಶ ಪಾಟೀಲ, ಡಾ.ಶಿವಕುಮಾರ ಮುಚಳಂಬೆ, ತ್ರೀವೆಣಿ ಹೊನ್ನಾ, ವಿಶ್ವನಾಥ ಉಪ್ಪೆ( ಜಿಲ್ಲಾ ಉಪಾಧ್ಯಕ್ಷರು), ಆನಂದ ರೆಡ್ಡಿ, ಡಾ.ಕೈಲಾಶಕುಮಾರ ಪಾಟೀಲ (ಕಾರ್ಯದರ್ಶಿ) ಮಲ್ಲಿಕಾರ್ಜುನ ಮಟ್ಟಲಕುಂಟೆ, ರಮೇಶ ಬಿರಾದಾರ, ಡಾ.ಸುರೇಖಾ ಬಿರಾದಾರ, ಉಮಾದೇವಿ ಹೂಗಾರ, ನಾಗರಾಜ ಬುಳ್ಳಾ (ಸಹ ಕಾರ್ಯದರ್ಶಿಗಳು) ಜಗದೀಶ ಬುಟ್ಟೆ, ನೀಲಮ್ಮಾ ರುಗನ್, ಡಾ.ಶಣ್ಮುಖಪ್ಪಾ ಜಮಶೇಟ್ಟಿ, ಅಶ್ವಿನಿ ಗಡೆ, ರವಿಂದ್ರ ಸೋರಳ್ಳಿ, ಪ್ರಾಂಜಲ ಮುಚಳಂಬೆ, ಡಾ.ಎಮ್.ಡಿ ಅಲ್ತಾಫ್, ಡಾ.ಚನ್ನವೀರ ಪಾಟೀಲ ( ಕಾರ್ಯಕಾರಿಣಿ ಸದಸ್ಯರು) ತಾಲ್ಲೂಕು ಸಂಚಾಲಕರು : ವಿನೋದ ಪಾಟೀಲ(ಬೀದರ) ಅನಿಲ ಪಸಾರ್ಗಿ (ಹುಮನಾಬಾದ), ಈಶ್ವರ ರುಮ್ಮಾ (ಭಾಲ್ಕಿ), ಲೊಕೇಶ ಮೊಳಕೆರೆ (ಬಸವಕಲ್ಯಾಣ) ಅರುಣ ಪಾಟೀಲ (ಔರಾದ).
ವರದಿ : ಸಂತೋಷ್ ಬಿಜಿ ಪಾಟೀಲ್