Ad imageAd image

ಮಹಿಳೆಯರಿಗೆ ಒಂದು ಕೊಲೆಗೆ ಶಿಕ್ಷೆ ವಿನಾಯಿತಿ ನೀಡಿ : ರಾಷ್ಟ್ರಪತಿಗೆ ಎನ್‌ಸಿಪಿ ನಾಯಕಿ ಮನವಿ 

Bharath Vaibhav
ಮಹಿಳೆಯರಿಗೆ ಒಂದು ಕೊಲೆಗೆ ಶಿಕ್ಷೆ ವಿನಾಯಿತಿ ನೀಡಿ : ರಾಷ್ಟ್ರಪತಿಗೆ ಎನ್‌ಸಿಪಿ ನಾಯಕಿ ಮನವಿ 
WhatsApp Group Join Now
Telegram Group Join Now

ಮುಂಬೈ: ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಎನ್‌ಸಿಪಿ (ಎಸ್‌ಪಿ) ಪಕ್ಷದ ಮಹಿಳಾ ವಿಭಾಗವು ಪತ್ರ ಬರೆದಿದೆ. ಅಪರಾಧಿಗಳಲ್ಲಿರುವ “ದಬ್ಬಾಳಿಕೆಯ ಮನಸ್ಥಿತಿ” ಮತ್ತು “ಅತ್ಯಾಚಾರ ಪ್ರವೃತ್ತಿ”ಯನ್ನು ಕೊಲ್ಲಲು “ಒಂದು ಕೊಲೆ”ಗೆ ಶಿಕ್ಷೆಯಿಂದ ವಿನಾಯಿತಿ ನೀಡಬೇಕೆಂದು ಪಕ್ಷ ಮನವಿ ಮಾಡಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬರೆದ ಪತ್ರದಲ್ಲಿ, ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಖಡ್ಸೆ ಅವರು ಮಹಿಳೆಯರ ಮೇಲಿನ ಅಪರಾಧಗಳಲ್ಲಿನ ಹೆಚ್ಚಳವನ್ನು ಎತ್ತಿ ತೋರಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉದಾಹರಣೆಯಾಗಿ ನೀಡಿ, ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.

“ಎಲ್ಲಾ ಮಹಿಳೆಯರ ಪರವಾಗಿ, ಒಂದು ಕೊಲೆ ಮಾಡಲು (ಶಿಕ್ಷೆಯಿಂದ) ವಿನಾಯಿತಿ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ” ಎಂದು ರೋಹಿಣಿ ಖಡ್ಸೆ ಪತ್ರದಲ್ಲಿ ತಿಳಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಪರೋಕ್ಷವಾಗಿ ಟೀಕಿಸಿರುವ ಅವರು, ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ಭಾರತವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶವಾಗಿದೆ ಎಂದು ಹೇಳುವ ಸಮೀಕ್ಷಾ ವರದಿಯನ್ನು ಉಲ್ಲೇಖಿಸಿರುವ ಖಡ್ಸೆ, ಅಪಹರಣ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!