ಬೆಂಗಳೂರು : ಸಮಾಜ ಮಠ ಮಾನ್ಯಗಳಿಗೆ ಅಭಿವೃದ್ಧಿಗೆ ಮತ್ತು ಉನ್ನತಿ ಕರಣಕ್ಕೆ ಸಮಾಜ ಮುಖಂಡರು ಉದ್ಯಮಿಗಳು ರಾಜಕಾರಣಿಗಳು ಮತ್ತು ಸಮಾಜದ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಹೆಗ್ಗನಹಳ್ಳಿ ಜೆಡಿಎಸ್ ಮಾಜಿ ಅಧ್ಯಕ್ಷ , ಕೈಗಾರಿಕಾ ಉದ್ಯಮಿ ಮತ್ತು ಮಹಾಪ್ರಭು ಶ್ರೀ ಕೆಂಪೇಗೌಡ ಕ್ಷೇಮಾಭಿವೃದ್ಧಿ ಸಂಘ ಗೌರವಾಧ್ಯಕ್ಷ ಆರ್ . ಕುಮಾರ್ ಹೇಳಿದರು.
ಅವರು ಮಹಾ ಪ್ರಭು ಶ್ರೀ ಕೆಂಪೇಗೌಡ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತೆರಳಿ ಪೂಜ್ಯೆ ಶ್ರೀ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಅವರು ಮಾತನಾಡಿದರು.
ಸಂಘ ಅಧ್ಯಕ್ಷ ಎಂ. ವಿಜಯಕುಮಾರ್, ಗೌರವಾಧ್ಯಕ್ಷ ಆರ್.ಕುಮಾರ್, ಪ್ರದಾನ ಕಾರ್ಯದರ್ಶಿ ಕೆ.ಬಿ ಶಿವಕುಮಾರ್, ಖಜಾಂಚಿ ಬಿ ಎಲ್ ಕುಮಾರ್, ಉಪಾಧ್ಯಕ್ಷರಾದ ಜಿ.ಸುರೇಶ್, ಮಲ್ಲೇಶ್, ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಮಠದ ದಾಸೋಹಕ್ಕೆ ಅಕ್ಕಿ ರಾಗಿ ಬೆಳೆ ಎಣ್ಣೆ ಅವಲಕ್ಕಿ ಈರುಳ್ಳಿ ಸೇರಿದಂತೆ ಇತರೆ ದವಸ ಧಾನ್ಯಗಳು ಮಠಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಪತ್ ಕುಮಾರ್, ಮಹಾಲಿಂಗಯ್ಯ, ಹೊನ್ನಯ್ಯ, ಲಕ್ಷ್ಮೀಕಾಂತ, ನರಸೇಗೌಡ, ಗೋಪಾಲಕೃಷ್ಣ, ಡಾ. ಕೃಷ್ಣಪ್ಪ, ಗಿರಿಗೌಡ, ರಂಗೇಗೌಡ, ಡಾ.ನಂಜುಡಯ್ಯ, ಪ್ರಕಾಶ್, ಕೆಂಪಯ್ಯ ವೇದಾವತಿ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್