ನಿಪ್ಪಾಣಿ : ಬದುಕಿನಲ್ಲಿ ವೃಕ್ಷಗಳು, ಪಶು, ಪಕ್ಷಿಗಳು, ಮಾನವನಿಗೆ ನೀಡಿದ ಕೊಡುಗೆ ಅಪಾರ. ಯಾವುದೇ ಅಪೇಕ್ಷೆಯನ್ನಿ ಡದೆ ಮಾನವನಿಗೆ ನಿರಂತರ ನೆರಳು ಫಲ ಕ್ಷೀರ ನೀಡುತ್ತವೆ.ಪರರಿಗಾಗಿ ಬದುಕುತ್ತವೆ. ಅದರಂತೆ ಮಾನವನಾಗಿ ಹುಟ್ಟಿದಮೇಲೆ ಪರೋಪಕಾರ, ದಯೆ, ವೃಕ್ಷ ನೆಡುವ ಪುಣ್ಯದ ಕಾರ್ಯದಲ್ಲಿ ತೊಡಗಬೇಕೆಂದು ಪ. ಪೂ. ಡಾ. ಶ್ರದ್ದಾನಂದ ಸ್ವಾಮೀಜಿ ತಿಳಿಸಿದರು.
ಅವರು ನಿಪ್ಪಾಣಿ ತಾಲೂಕಿನ ಸದಲಗಾ ಪಟ್ಟಣದ ಗಣೇಶ ಮಂದಿರ ಪರಿಸರದಲ್ಲಿ NDRF ತಂಡ, ಪೊಲೀಸ್ ಇಲಾಖೆ ಹಾಗೂ ಸ್ವಚ್ಛ ಅಭಿಯಾನ ಸಮಿತಿ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡ ಡಾ. Ahmedabad ರಾಧಾಕೃಷ್ಣ ಹಾಗೂ ಸಿದ್ದೇಶ್ವರ ಸ್ವಾಮಿಗಳ ಜಯಂತಿ ಪ್ರಯುಕ್ತ ವೃಕ್ಷಾರೊಪನ ಕಾರ್ಯಕ್ರಮದಲ್ಲಿ ಸಾನಿಧ್ಯತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಡಾ. ರಾಧಾಕೃಷ್ಣನ ಮತ್ತು ನಡೆದಾಡುವ ದೇವರು ಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತದನಂತರ ಸಕಲ ಗಣ್ಯರಿಂದ, ಪತ್ರಕರ್ತರಿಂದ ವೃಕ್ಷಾ ರೋಪನ ಮಾಡಲಾಯಿತು ಸಮಾರಂಭದಲ್ಲಿ ಎನ್ ಡಿ ಆರ್ ಎಫ್ ತಂಡದ ಬಟಾಲಿಯನ್ ಬಬ್ಲು ವಿಶ್ವಾಸ್ ಹಾಗೂ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಭಾವ ಸಾಹೇಬ್ ಗುಂಡೇಕಲ್ಲೇ ಪೋಲಿಸ್ ಸಹಾಯಕ ನಿರೀಕ್ಷಕ ಸಂಜೀವ್ ಜಮಕೋಳಿ ಮಾತನಾಡಿದರು.
ತದನಂತರ ಸಂಘಟನೆ ವತಿಯಿಂದ ನಿವೃತ್ತಿ ಶಿಕ್ಷಕರಾದ ಯು ಜಿ ಪತ್ತಾರ್ ಪ್ರಕಾಶ್ ಬೋಜೆ, ಮಹದೇವ ಖೋತ, ಹೊನ್ನಯ್ಕ,ಸರ್ ಸಂತೋಷ್ ಸಂದ್ರೆ, ರಾಜೇಂದ್ರ ಹಾಲಪ್ಪನವರ ಹಾಗೂ ವ್ರಕ್ಷ ರಕ್ಷಣೆಯ ಸ್ವಯಂ ಪ್ರೇರಕರಾದ, ನೀಲಕಂಠ ಫಕಿರೆ, ಯವರಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅತಿಕ್ರಾಂತ ಪಾಟೀಲ್ ಶಾಂತಿನಾಥ್ ಉಗಾರೆ ಶ್ರೀಶೈಲ ಕಮತೆ, ರಾಜು ಅಮೃತ ಸಮ್ಮಣ್ಣವರ, ಸಿರಿಶ್ ಅಡಕೆ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಪುಂಡಲಿಕ ಲಮಾಣಿ ಸ್ವಾಗತಿಸಿದರು. ಮಹಾದೇವ ಖೋತ ನಿರೂಪಿಸಿ ವಂದಿಸಿದರು.
ವರದಿ : ಮಹಾವೀರ ಚಿಂಚಣೆ.




