———————————————ರಾಜ್ಯ ಪ್ರೌಢ ಸೇವಾ ನೌಕರರ ಸಂಘದ ಸದಲಗಾ ಘಟಕದ ಬೆಂಬಲ
ನಿಪ್ಪಾಣಿ: ಸದಲಗಾ ಪುರಸಭೆಯ ಎಲ್ಲ ನೌಕರರು ಸಂಘದ ಸದಸ್ಯರೆಲ್ಲರು ಪೌರನೌಕರರಗೆ ನಾವು ಬೆಂಬಲ ನೀಡುತಿದ್ದೇವೆ. ದಿನಾಂಕ 12/4/2025.ರಂದು ರಾಯಬಾಗ್ ಪಟ್ಟಣದಲ್ಲಿ ನಡೆದ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ಪೌರಸೇವಾ ನೌಕರರ ಬೇಡಿಕೆಗಳ ಬಗ್ಗೆ ಒಂದು ತಿಂಗಳ ಮುಷ್ಕರ ನೋಟೀಸನ್ನು ಸರ್ಕಾರಕ್ಕೆ ಸಲ್ಲಿಸಲು ಸದರಿ ಅವಧಿ ಒಳಗೆ ಬೇಡಿಕೆಯನ್ನು ಈಡೇರಿಸದೆ ಇದ್ದಲ್ಲಿ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳಲು ನಿರ್ಣಯಿಸಲಾಗಿರುತ್ತದೆ.

ಈ ಮುಷ್ಕರ ಪ್ರಾರಂಭಿಸಿದ್ದು ದಿನಾಂಕ 2/6 /2025 ರಿಂದ ನೀರು ಸರಬರಾಜು ಸಹ ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳಲು ತೀರ್ಮಾನಿಸಿದ್ದು ಮುಂದಿನ ರಾಜ್ಯ ಸಂಘದಿಂದ ಸಂದೇಶ ಬರುವವರೆಗೂ ಮುಷ್ಕರವನ್ನು ಮುಂದುವರೆಸಲಾಗುವುದೆಂದು ರಾಜ್ಯ ಪ್ರೌಢ ಸೇವಾ ನೌಕರರ ಸಂಘದ ಸದಲಗಾ ಘಟಕದ ಅಧ್ಯಕ್ಷ ಸಂಜೀವ ಗುಡೇ ತಿಳಿಸಿದರು.
ಸರ್ಕಾರ ನಮ್ಮ ಪ್ರಮುಖ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದು ನಮ್ಮ ಬೇಡಿಕೆಗಳು ನ್ಯಾಯ ಸಮ್ಮತವಾಗಿವೆ.ಎಂದು ತಿಳಿಸಿ ಬೇಕೇ ಬೇಕು ನ್ಯಾಯ ಬೇಕು ಎಲ್ಲಿಯ ವರೆಗೆ ಹೋರಾಟ ಬೇಡಿಕೆ ಈಡೇರಿಸುವ ವರೆಗೆ ಹೋರಾಟ ಎಂದು ಘೋಷಣೆ ಕೂಗಿದರು.
ಇದೇ ವೇಳೆ ಮುಖ್ಯಾಧಿಕಾರಿ ಶಿವಾನಂದ ಭೋಸಲೆ ಹಾಗೂ ನಾಡ ಕಚೇರಿಗೆ ತೆರಳಿ ಉಪತಹಸೀಲ್ದಾರ ಶೀಲವಂತ ಸರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇನ್ನು ಮುಷ್ಕರದಲ್ಲಿ ಪೌರನೌಕರರು ಹಲಗಿ ಬಾರಿಸುತ್ತ ಸರಕಾರ ನಮ್ಮ ಬೇಡಿಕೆ ಇಡೆರಿಸಬೇಕು,ಅಲ್ಲಿಯವರೆಗೆ ನಮ್ಮ ಮುಷ್ಕರ ಮುಂದೆವರೆಯುತ್ತದೆ ಎಂದರು. ಮುಷ್ಕರದಲ್ಲಿ ಕಾರ್ಯದರ್ಶಿ ಎಂ ಬಿ ಗೌಂಡಿ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಕನೆ ಎಲ್.ಬೀ. ಮಧಾಳೆ ಐ.ಬೀ.ಶೇಷನ್, ಪ್ರಕಾಶ ಮುಗಳಿ ಡಿ.ಎಸ್.ಹಿರೇಮಠ್ ವಿಜಯ ಪಾಟೀಲ್ ರೂಪೇಶ ಕರಂಗಳೆ ಸೇರಿ 20ಕ್ಕು ಅಧಿಕ ವಿದ್ಯುತ್ ನೀರು ಸರಬರಾಜು ಸ್ವಚ್ಚತೆ ಕಾರ್ಮಿಕರು ಪಾಲ್ಗೊಂಡಿದ್ದರು.
ವರದಿ: ಮಹಾವೀರ ಚಿಂಚಣೆ




