ಹುಬ್ಬಳ್ಳಿ : ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL), ನ ವಿದ್ಯಾರ್ಥಿಗಳಾದ ಧಾರವಾಡದ ದೈವಿಕ್ ಅಂಬಾಟಿ ಮತ್ತು ದಕ್ಷ ಶ್ರೀಕಂಠ ರಾಮನಗೌಡರ ಅವರು ನೀಟ್ ಯುಜಿ ೨೦೨೫ ಪರೀಕ್ಷೆಯಲ್ಲಿ ಕ್ರಮವಾಗಿ ಆಲ್‌ಇಂಡಿಯಾ ರ್‍ಯಾಂಕಿಂಗ್ 513 ಮತ್ತು 318 ರೊಂದಿಗೆ ಅಗ್ರ ಅಂಕಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದೆ. ವಿದ್ಯಾರ್ಥಿಗಳ ಬದ್ಧತೆ, ಶೈಕ್ಷಣಿಕ ಶಿಸ್ತು ಮತ್ತು ಆಕಾಶ ಸಂಸ್ಥೆ ಒದಗಿಸಿದ ವಿಶ್ವ ದರ್ಜೆಯ ತರಬೇತಿ ಮತ್ತು ಮಾರ್ಗದರ್ಶನದಿಂದ ಈ ಅಸಾಧಾರಣ ಫಲಿತಾಂಶ ಸಾಧನೆಗೆ ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.
ಇಬ್ಬರೂ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಆಕಾಶ ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ, ವಿಶ್ವದ ಅತ್ಯಂತ ಸವಾಲಿನ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅನ್ನು ನಿಭಾಯಿಸಲು ತರಗತಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ದಾಖಲಾಗಿದ್ದರು. ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ AESL ಹಾಕಿದ ಬಲವಾದ ಶೈಕ್ಷಣಿಕ ಅಡಿಪಾಯ, ಅವರ ಪರಿಕಲ್ಪನಾ ಸ್ಪಷ್ಟತೆ ಮತ್ತು ಸ್ಥಿರ ಮತ್ತು ಶಿಸ್ತಿನ ಅಧ್ಯಯನ ದಿನಚರಿ ಕಾರಣ ಎಂದು ಹೇಳಿದರು.
’ಈ ಪ್ರಯಾಣದ ಉದ್ದಕ್ಕೂ ನಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನಾವು ಆಕಾಶಕ್ಕೆ ತುಂಬಾ ಕೃತಜ್ಞ ರಾಗಿರುತ್ತೇವೆ. ರಚನಾತ್ಮಕ ವಿಷಯ, ತಜ್ಞರ ಬೋಧನೆ ಮತ್ತು ವೈಯಕ್ತಿಕ ಮಾರ್ಗದರ್ಶನವು ಕಡಿಮೆ ಸಮಯದಲ್ಲಿ ಸಂಕೀರ್ಣ ವಿಷಯಗಳನ್ನು ಕರಗತ ಮಾಡಿ ಕೊಳ್ಳಲು ನಮಗೆ ಸಹಾಯ ಮಾಡಿತು. AESL ಇಲ್ಲದಿದ್ದರೆ, ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ’ ಎಂದು ಸಾಧನೆ ಮಾಡಿದ ವಿದ್ಯಾರ್ಥಿಗಳು ತಮ್ಮ ಖುಷಿ ಹಂಚಿಕೊಂಡರು.
ವರದಿ: ಸುಧೀರ್ ಕುಲಕರ್ಣಿ




